“ಪ್ರಭುದೇವನಿಗಾಗಿ ನಾನು ಸಸ್ಯಹಾರಿಯಾಗಿದ್ದೆ” – ನಟಿ ವನಿತಾ ವಿಜಯಕುಮಾರ್

(ನ್ಯೂಸ್ ಕಡಬ) newskadaba.com ತಮಿಳುನಾಡು, ಜು. 25. ಜನಪ್ರಿಯ ಹಿರಿಯ ನಟ ವಿಜಯಕುಮಾರ್ ಅವರ ಪುತ್ರಿ ನಟಿ ವನಿತಾ ವಿಜಯಕುಮಾರ್ ಅವರ ಮೇಲೆ  ಆಗಾಗ ವಿವಾದಗಳು ಬರುತ್ತಿದ್ದು, ಅದು ಹೇಗೆ ಬರುತ್ತವೋ ಗೊತ್ತಿಲ್ಲ. ತಂದೆಯಿಂದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ನಟಿ ಹಲವು ಸಿನಿಮಾಗಳಿಗೆ ನಾಯಕಿಯಾಗಿಯೂ ನಟಿಸಿದ್ದರು. ಬಳಿಕ ನಟಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಆದರೆ, ನಟನೆಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಟಿ ವನಿತಾ ವಿಜಯಕುಮಾರ್ ತನ್ನ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿಲ್ಲ ಎಂಬುದು ಕೇಳಿಬರುತ್ತಿದೆ. ಮಗಳ ವೈಯಕ್ತಿಕ ನಿರ್ಧಾರಗಳಿಂದ ತಂದೆ ವಿಜಯಕುಮಾರ್ ಮತ್ತು ಆಕೆಯ ಸಹೋದರ ಅರುಣ್ ವಿಜಯ್ ವನಿತಾರಿಂದ ದೂರವಿದ್ದಾರೆ ಎನ್ನಲಾಗುತ್ತಿದ್ದು, ಇನ್ನು ನಟಿ ಎಷ್ಟೋ ಬಾರಿ ತಂದೆಯ ವಿರುದ್ಧವಾಗಿಯೂ ಮಾತನಾಡಿದ್ದಾರೆ ಎನ್ನಲಾಗಿದೆ.

ದಾಂಪತ್ಯ ಜೀವನದಲ್ಲಿಯೂ ನಟಿ ಉತ್ತಮ ಬಾಂಧವ್ಯವನ್ನು ಹೊಂದಿರದ ನಟಿ ಎರಡು ಬಾರಿ ವಿವಾಹವಾಗಿದ್ದರು. ಮೊದಲು ನೃತ್ಯ ನಿರ್ದೇಶಕ ರಾಬರ್ಟ್ ಮಾಸ್ಟರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಅದು ಬಹಳ ದಿನ ಉಳಿಯಲಿಲ್ಲ. ನಂತರ ಪೀಟರ್‌ ಪಾಲ್ ಜೊತೆ ಮದುವೆಯಾದರೂ ಈ ಸಂಬಂಧವು ಬೇಗನೇ ಅಂತ್ಯವಾಗಿದೆ ಎನ್ನಲಾಗಿದೆ.

Also Read  ಹೆಣ್ಣು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ

ಇದೀಗ ನಟಿ ವನಿತಾ ವಿಜಯ್‌ ಕುಮಾರ್‌ ನೃತ್ಯ ನಿರ್ದೇಶಕ, ನಟ ಹಾಗೂ ನಿರ್ದೇಶಕ ಪ್ರಭುದೇವ ಬಗ್ಗೆ ಕೆಲವು ವಿಷಯಗಳನ್ನು ಹೊರಹಾಕಿದ್ದು, “ನಾನು ಪ್ರಭುದೇವರವರ ಅಭಿಮಾನಿ, ಅವರನ್ನು ನಾನು ಹುಚ್ಚರಂತೆ ಪ್ರೀತಿಸುತ್ತಿದ್ದೆ. ಅವರ ಪ್ರಿ ಸಿನಿಮಾದ ಪೋಟೋಗಳನ್ನು ನನ್ನ ಕೋಣೆಯಲ್ಲಿ ಹಾಕಿಕೊಳ್ಳುತ್ತಿದ್ದೆ. ಪ್ರಭುದೇವರನ್ನು ಇಷ್ಟು ಪಡುತ್ತಿದ್ದದ್ದನ್ನು ನೋಡಿ ತಂದೆ ಅವರನ್ನೇ ಮನೆಗೆ ಕರೆದುಕೊಂಡು ಬಂದಿದ್ದರು. ಪ್ರಭುದೇವ ಬರುತ್ತಾರೆಂದು ತಿಳಿದ ನಾನು ಅವರಿಗಾಗಿ ಮಾಂಸಾಹಾರದ ಅಡುಗೆಯನ್ನು ಮಾಡಿದ್ದೆ. ಆದರೆ ಪ್ರಭುದೇವ ಅವರು ಮಾಂಸಾರವನ್ನು ಸೇವಿಸುತ್ತಿರಲಿಲ್ಲ. ಆ ವಿಷಯವನ್ನು ಕೇಳಿ ನನಗೆ ಶಾಕ್ ಆಗಿತ್ತು. ನಂತರ ಅವರಿಗೆ ಮೊಟ್ಟೆಯನ್ನು ಬೇಯಿಸಿ ಬಡಿಸಿದೆ. ಅಲ್ಲದೇ ಕೆಲವು ದಿನಗಳವರೆಗೆ ನಾನು ಸಹ ಮಾಂಸಹಾರವನ್ನು ಬಿಟ್ಟಿದ್ದೆ” ಎಂದು ಹೇಳಿದ್ದಾರೆ ಎಂಬುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Also Read  ಈ ರಾಶಿಯವರನ್ನು ನೀವು ಮದುವೆ ಆದರೆ….? ನಿಮ್ಮ ಅದೃಷ್ಟವೇ ಬದಲಾಗಲಿದೇ ನೀವು ಅಂದುಕೊಂಡಂತೆ ಜೀವನ ನಡೆಸಬಹುದು.

error: Content is protected !!
Scroll to Top