ಐಸಿಯು ನಲ್ಲಿ ದಾಖಲಾಗಿದ್ದ ರೋಗಿಯ ಕಿವಿ, ಹಣೆ, ಕಾಲುಗಳಿಗೆ ಕಚ್ಚಿದ ಇಲಿಗಳು

(ನ್ಯೂಸ್ ಕಡಬ) newskadaba.com ಬದೌನ್, ಜು. 25. ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ರೋಗಿಯೋರ್ವರನ್ನು ಇಲಿಗಳು ಕಚ್ಚಿವೆ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿರುವುದಾಗಿಯೂ ವರದಿಯಾಗಿದೆ.

ದಾತಗಂಜ್ ತಹಸಿಲ್ ಪ್ರದೇಶದ ಬುದ್ ಬಜಾರ್ ಪಟ್ಟಣದ ನಿವಾಸಿ ರಾಮ್ ಸೇವಕ್ ಗುಪ್ತಾ ಎಂಬವರು ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿತ್ತು.  ಭಾನುವಾರದಂದು ರಾತ್ರಿ, ಗುಪ್ತಾ ರವರ ಪತ್ನಿ ಐಸಿಯುಗೆ ಹೋದಾಗ, ಇಲಿಯು ರೋಗಿಯ ಪಾದಗಳನ್ನು ಕಚ್ಚುತ್ತಿದ್ದು, ಅದರಿಂದ ರಕ್ತ ಹೊರಬರುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲದೇ ಅವರ ಹಣೆ, ಕಿವಿ ಮತ್ತು ಕಾಲು ಬೆರಳುಗಳ ಮೇಲೆ ಇಲಿ ಕಚ್ಚಿದ ಗುರುತುಗಳಿದ್ದವು. ಈ ಕುರಿತು ರೋಗಿಯ ಕುಟುಂಬಿಕರು ವಾರ್ಡ್‌ ಸಿಬ್ಬಂದಿಯ ನಿರ್ಲಕ್ಷ್ಯತನದಿಂದ ಈ ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

Also Read  100 ರೂಪಾಯಿಗಾಗಿ ಮಗನನ್ನೇ ಕುಡಿದ ಮತ್ತಿನಲ್ಲಿ ಕೊಂದ ಪಾಪಿ ತಂದೆ

ಬಳಿಕ ಪರಿಶೀಲನೆ ನಡೆಸಿದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಸಿ.ಪ್ರಜಾಪತಿ, ಆಕ್ಸಿಜನ್ ಪೈಪ್ ಅಳವಡಿಸಿದ್ದ ಪ್ರದೇಶದಲ್ಲಿ ಇರುವ ರಂಧ್ರದಿಂದ ಇಲಿಗಳು ಬರುತ್ತಿವೆ. ಅಲ್ಲದೇ ಇದೇ ಪ್ರದೇಶದಲ್ಲಿ ಕುಳಿತು ಆಹಾರ ಸೇವಿಸುತ್ತಿರುವುದರಿಂದ ಇಲಿಗಳ ಸಂಖ್ಯೆ ಹೆಚ್ಚಿದೆ, ವಿಚಾರಣೆ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Also Read  ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ➤ ಯುವಕ ಮೃತ್ಯು

error: Content is protected !!
Scroll to Top