ಝೈಬುನ್ನಿಸಾ ಆತ್ಮಹತ್ಯೆ ಪ್ರಕರಣ ► ಉನ್ನತ ಮಟ್ಟದ ತನಿಖೆಗೆ ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಜ.30. ಇತ್ತೀಚೆಗೆ ಕೆ.ಆರ್. ಪೇಟೆ ವಸತಿ ಶಾಲೆಯಲ್ಲಿ ನಡೆದ ಹತ್ತನೇ ತರಗತಿ ವಿದ್ಯಾರ್ಥಿನಿ ಝೈಬುನ್ನಿಸಾ ನಿಗೂಢ ಸಾವು ಪ್ರಕರಣವನ್ನು ಸಮಗ್ರ ತನಿಖೆ ನಡೆಸಿ ಅಪರಾಧಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಡಬ ಬ್ಲಾಕ್ ಕಾಂಗ್ರೆಸ್ ಗೃಹ ಮಂತ್ರಿಗಳನ್ನು ಒತ್ತಾಯಿಸಿದೆ.

ಒಬ್ಬ ಗುರುವಾಗಿ ಜ್ಞಾನ ಶಕ್ತಿಯನ್ನು ನೀಡಬೇಕಿದ್ದ ಶಿಕ್ಷಕ ರವಿ ಎಂಬಾತ ಪ್ರತಿಭಾನ್ವಿತ ವಿದ್ಯಾರ್ಥಿನಿ ಉತ್ತಮ ಗುಣನಡತೆಯವಳಾಗಿದ್ದ ಝೈಬುನ್ನಿಸಾಳಿಗೆ ಕಿರುಕುಳ ನೀಡಿರುವುದ ಬಗ್ಗೆ ದೂರಲಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಒಡಿ ತನಿಖೆಗೆ ಒಳಪಡಿಸಬೇಕೆಂದು ರಾಜ್ಯದ ಗೃಹಮಂತ್ರಿಗಳು ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಯೋಗವನ್ನು ಒತ್ತಾಯಿಸಿದ ಕಡಬ ಬ್ಲಾಕ್ ಕಾಂಗ್ರೆಸ್ ವಕ್ತಾರ ಕೆ.ಎಂ ಹನೀಫ್‌ರವರು ಒತ್ತಾಯಿಸಿದ್ದಾರೆ.

Also Read  ಟ್ರಕ್ ಢಿಕ್ಕಿ- ಯವಕ ಮೃತ್ಯು; ಅಂಗಾಂಗ ದಾನ

error: Content is protected !!
Scroll to Top