ಕಡಬ: ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿಯರ ತರಬೇತಿ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜು. 25. ಕಳೆದ 9 ವರ್ಷಗಳಿಂದ ಐಐಸಿಟಿ ವಿದ್ಯಾಸಂಸ್ಥೆಯ ಮೂಲಕ  ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಗತಿ, ಟ್ಯುಟೋರಿಯಲ್ ಹಾಗೂ ಟ್ಯೂಷನ್ ತರಗತಿ, ನವೋದಯ ತರಬೇತಿ, ಅಬಾಕಸ್  ಶಿಕ್ಷಣವನ್ನು ನೀಡುತ್ತಿದ್ದು, ಇದೀಗ ಅತ್ಯಂತ ಬೇಡಿಕೆಯಲ್ಲಿರುವ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿಯನ್ನು ಆರಂಭಿಸಿದ್ದು, ಜು.22ರಂದು ಕೊಕ್ಕಡ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕರಾದ ವಿಶ್ವನಾಥ ರೈ ಅವರು ದೀಪ ಬೆಳಗಿಸಿ ನೂತನವಾಗಿ ಆರಂಭಗೊಂಡ ನರ್ಸರಿ ಶಿಕ್ಷಕರ ತರಬೇತಿಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಒಂದು ದೇಶದ ಭವಿಷ್ಯವು ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತದೆ, ಆದುದರಿಂದ ಒಂದು ದೇಶ ಉತ್ತಮವಾಗಬೇಕಾದರೆ ಶಿಕ್ಷಣವೆಂಬುದು ಬಹಳ ಅಗತ್ಯ, ಯಾವುದಾದರೂ ದೇಶವನ್ನು ಹಾಳು ಮಾಡಬೇಕಾದರೂ ಅಲ್ಲಿಗೆ ಯಾವುದೇ ಬಾಂಬುಗಳು ಬೇಕಾಗಿಲ್ಲ, ಅಣು ಅಸ್ತ್ರಗಳು ಬೇಕಾಗಿಲ್ಲ ಶಿಕ್ಷಣ ವ್ಯವಸ್ಥೆಯನ್ನು ಕುಲಗೆಡಿಸಿದರಾಯಿತು ಆ ದೇಶ ನಿಧಾನವಾಗಿ ಅದಪತನದತ್ತ ಹೋಗುತ್ತದೆ, ಹಾಗಾಗಿ ಶಿಕ್ಷಣಕ್ಕಾಗಿ ಎಲ್ಲ ರಾಷ್ಟ್ರಗಳು ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಿಕ್ಷಣ ಕೊಡುವ ದೃಷ್ಟಿಯಲ್ಲಿ ಸರಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಅದೇ ರೀತಿ  ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿಯು ಅತ್ಯಂತ ಬೇಡಿಕೆಯಲ್ಲಿರುವ ತರಬೇತಿಯಾಗಿದೆ, ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂಥ ತರಬೇತಿಯನ್ನು ಈ ಶಿಕ್ಷಣದ ಸಂಸ್ಥೆಯಲ್ಲಿ ನೀಡುತ್ತಿರುವುದು ಹೆಮ್ಮೆಯಾಗಿದೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಡಬ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರರಾದ ಬಾಲಕೃಷ್ಣ ಕೊಯಿಲ ಮಾತನಾಡಿ, ಕಡಬ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ. ಬಹಳಷ್ಟು ಶಿಕ್ಷಣ ಸಂಸ್ಥೆಗಳು ಇಲ್ಲಿ ಬೆಳೆಯುತ್ತಿದೆ, ಅಭಿವೃದ್ಧಿಯನ್ನು ಹೊಂದುತ್ತಿವೆ. ಇದಕ್ಕೊಂದು ದೊಡ್ಡ ಕೊಡುಗೆಯನ್ನು ಐಐಸಿಟಿ ವಿದ್ಯಾಸಂಸ್ಥೆ ನೀಡಿದೆ. ಜಗತ್ತಿನಲ್ಲಿಡೆ ಈಗ ಸ್ಪರ್ಧಾತ್ಮಕ ಯುಗ ಈ ನಡುವೆ ನಾವು ಹೇಗೆ ಹೊಂದಿಕೊಳ್ಳುತ್ತೇವೆ, ಯಾವ ರೀತಿ ಎದುರಿಸುತ್ತೇವೆ ಎಂಬುದಕ್ಕೆ ಈ ರೀತಿ ಸಂಸ್ಥೆಗಳು ಆರಂಭವಾಗುತ್ತಿರುವುದು ಸಂತಸದಾಯಕವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಸಂಸ್ಥೆಯು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ನೀಡುವಂತಾಗಲಿ ಎಂದು ಹಾರೈಸಿದರು.

Also Read  ಇಂದು ಸಂಜೆ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ವೀಕೆಂಡ್ ಕರ್ಫ್ಯೂ ➤ ಯಾವುದಕ್ಕೆಲ್ಲಾ ವಿನಾಯಿತಿ ಇದೆ..?

ಇನ್ನೋರ್ವ ಮುಖ್ಯ ಅತಿಥಿ ಸ್ಥಾನದಲ್ಲಿ ಉಪಸ್ಥಿತರಿದ್ದ ನೆಲ್ಯಾಡಿ ಸಂತ ಚಾರ್ಜ್ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ವಿಶ್ವನಾಥ ಶೆಟ್ಟಿ ಕೆ. ರವರು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು. ಶ್ರೀಮತಿ ಗಂಗಾ ಪ್ರಾರ್ಥಿಸಿದರು. ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಸಿಎಚ್  ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ನಾಗರಾಜ್, ಸುದ್ದಿ ಬಿಡುಗಡೆಯ ವರದಿಗಾರರಾದ ವಿಜಯ್ ಕುಮಾರ್, v4 ಚಾನಲ್ ವರದಿಗಾರರಾದ ದಿವಾಕರ, ವಾರ್ತಾ ಭಾರತಿ ಪತ್ರಿಕೆಯ ವರದಿಗಾರದ ತಸ್ಲೀಮ್, ಕಟ್ಟಡದ ಮಾಲಕರಾದ ಜೋಯಲ್,  ಜೈ ಭಗವಾನ್ ಸ್ಟೋರ್ ಮಾಲಕರಾದ ರಾಜ್ ಕುಮಾರ್, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು.

Also Read  ಸುಳ್ಯ: ಕಾರಿಗೆ ಬೈಕ್‌ ಡಿಕ್ಕಿ- ಸವಾರರಿಗೆ ಗಾಯ

ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿ ಪಡೆಯಲು ಬಯಸುವ ವಿದ್ಯಾರ್ಥಿನಿಯರು ದೂರವಾಣಿ ಸಂಖ್ಯೆ 9448409912, 8496085912  ಸಂಪರ್ಕಿಸಬಹುದು.

error: Content is protected !!
Scroll to Top