ಅಮಲು ಮಿಶ್ರಿತ ಚಾಕೋಲೇಟ್ ಮಾರಾಟ ಪ್ರಕರಣ – ತಪ್ಪೊಪ್ಪಿಕೊಂಡ ಮನೋಹರ್ ಶೇಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 24. ಅಮಲು ಮಿಶ್ರಿತ ಚಾಕೋಲೆಟ್ ಮಾರಾಟಕ್ಕೆ ಸಂಬಂಧಿಸಿದಂತೆ ದೇವಸ್ಥಾನ, ಜಾತ್ರೆ ಸಂದರ್ಭದಲ್ಲಿ ಅಮಲು ಮಿಶ್ರಿತ ಬಾಂಗ್‌ ತೆಗೆದುಕೊಳ್ಳುವ ಕ್ರಮ ಇದೆ ಎಂಬ ಹೇಳಿಕೆ ನೀಡಿದ್ದ ಮಂಗಳೂರು ರಥಬೀದಿ ವ್ಯಾಪಾರಿ ಮನೋಹರ ಶೇಟ್ ಇದೀಗ ತಪ್ಪೊಪ್ಪಿಗೆಯ ಹೇಳಿಕೆ ನೀಡಿದ್ದು ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಮನೋಹರ್ ಶೇಟ್, ಮಂಗಳೂರಿನ ರಥಬೀದಿಯಲ್ಲಿ ಕಳೆದ ಹಲವು ವರ್ಷಗಳಿಂದ ಬಾಂಗ್ ಎನ್ನುವ ಮಾದಕ ದ್ರವ್ಯ ಮಾರಾಟ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಅಮಲುಮಿಶ್ರಿತ ಚಾಕೋಲೇಟ್‌ಗಳನ್ನು ಪೊಲೀಸರು ಜುಲೈ 18ರಂದು ವಶಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ  ಬಾಂಗ್‌ ಎನ್ನುವುದು ಜಾತ್ರೆಯ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಾರೆ ಎಂದು ಅಸಂಬಧ್ಧ ಹೇಳಿಕೆ ನೀಡಿದ್ದೆ. ಅಲ್ಲದೇ ದೇವಸ್ಥಾನದ ರಥೋತ್ಸವ, ಓಕುಳಿ ಸಮಯದಲ್ಲಿ ಸೇವಿಸುತ್ತಾರೆ ಎಂಬುದಾಗಿಯೂ ಹೇಳಿದ್ದರು.

Also Read  ಅಜಿಲಮೊಗರು : ಶಾಲೆಗೆ ತೆರಳುತ್ತಿದ್ದ ಮಕ್ಕಳ ಕಿಡ್ನಾಪ್ ಗೆ ಯತ್ನ..?                                 

ಹಿಂದೂ ಸನಾತನದಲ್ಲಿ ಅಂತಹ ಸಂಪ್ರದಾಯಗಳಿಲ್ಲ. ಅಲ್ಲದೆ ಯೋಗ ಗುರು ಬಾಬಾ ರಾಮ್‌ ದೇವ್ ಅವರ ಬಗ್ಗೆಯೂ ಹಗುರವಾದ ಮಾತು ಹೇಳಿದ್ದೆ. ನನಗೆ ಮೆದುಳಿನ ಶಸ್ತ್ರ ಚಿಕಿತ್ಸೆ ಆಗಿದ್ದು, ಮಾನಸಿಕವಾಗಿ ಅನಾರೋಗ್ಯಕ್ಕೆ ಒಳಗಾಗಿದೆ ಆದ್ದರಿಂದ, ತಿಳಿಯದೇ ಏನೇನೋ ಹೇಳಿಕೆ ಕೊಟ್ಟಿದೆ. ಹೀಗಾಗಿ ತಾನು ನೀಡಿದ ಹೇಳಿಕೆಯನ್ನು ಸಮಾಜದವರು, ದೇವಸ್ಥಾನದ ಆಡಳಿತ ಮಂಡಳಿ, ಭಕ್ತರು ಗಂಭೀರವಾಗಿ ಪರಿಗಣಿಸದೇ ಕ್ಷಮೆ ನೀಡಬೇಕೆಂದು ಮನೋಹರ್‌ ಶೇಟ್  ಕೇಳಿಕೊಂಡಿದ್ದಾರೆ. ಈ ಸಂದರ್ಭ ಮನೋಹರ ಶೇಟ್ ಅವರ ಸಹೋದರ ಪ್ರಕಾಶ್ ಡಿ ಶೇಟ್‌, ಮನೋಜ್‌ ಶ್ರೀನಿವಾಸ ನಾಯಕ್‌ ಉಪಸ್ಥಿತರಿದ್ದರು.

Also Read  ತೂಗು ಸೇತುವೆಯ ರೋಪ್ ತುಂಡಾಗಿ ಬಿದ್ದು ಮೂವರು ಗಾಯ

error: Content is protected !!
Scroll to Top