ದಿನಸಿ, ಡ್ರೆಸ್ ಮತ್ತು ಫ್ಯಾನ್ಸಿ ಅಂಗಡಿಯಿಂದ ಕಳ್ಳತನ

Theft, crime, Robbery

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 24. ದಿನಸಿ, ಡ್ರೆಸ್ ಮತ್ತು ಫ್ಯಾನ್ಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಸಾವಿರಾರು ರೂ. ಮೌಲ್ಯದ ಇತರ ಸ್ವತ್ತುಗಳನ್ನು ಕಳವು ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ  ನಡೆದಿದೆ.

ಬಂಟ್ವಾಳದ ಅಲ್ಬರ್ಟ್ ಫೆರ್ನಾಂಡೀಸ್ ಬಿಲ್ಡಿಂಗ್ ನಲ್ಲಿದ್ದ ನಮಿತಾ ಎಂಬವರ ರಾಜೇಶ್ವರಿ ದಿನಸಿ ಅಂಗಡಿ ಮತ್ತು ರಾಜರಾಜೇಶ್ವರಿ ಡ್ರೆಸ್ ಮತ್ತು ಫ್ಯಾನ್ಸಿ ಅಂಗಡಿಯಲ್ಲಿ ಜು. 22 ರಂದು ಕಳ್ಳತನ ನಡೆದಿದ್ದು, ಜು. 23 ರ ಅದಿತ್ಯವಾರ ಬೆಳಿಗ್ಗೆ 6 ಗಂಟೆಗೆ ಪರಿಚಯದ ವಸಂತ ಎಂಬವರು ಕರೆ ಮಾಡಿ ಮಾಲೀಕರಿಗೆ ಅಂಗಡಿಯ ಶಟರ್ ಅರ್ಧ ತೆರೆದಿರುವ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಅಂಗಡಿಗೆ ಬಂದು ನೋಡಿದಾಗ ಅಂಗಡಿಯಲ್ಲಿ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಘಟನಯಲ್ಲಿ ರಾಜರಾಜೇಶ್ವರಿ ದಿನಸಿ ಅಂಗಡಿಯ ಶಟರ್ ನ್ನು ಕಬ್ಬಿಣದ ಸಾಧನದಿಂದ ಮೇಲಕ್ಕೆತ್ತಿ ಅಂಗಡಿಯ ಒಳಗಿದ್ದ ಬಿಸ್ಕಟ್ ಪ್ಯಾಕೇಟ್‌, ಸಿಗರೇಟ್ ಪ್ಯಾಕೇಟ್‌, ಕ್ಯಾಶ್ ಡ್ರಾವರ್ ನ ಬೀಗವನ್ನು ಮುರಿದು ಅದರಲ್ಲಿದ್ದ ನಗದು 1,500ರೂ ಕಳವು ಮಾಡಲಾಗಿದೆ.

Also Read  ಸುಗಮ ಸಂಚಾರಕ್ಕೆ ಪರ್ಯಾಯ ನಿಲುಗಡೆಗೆ ಆದೇಶ

ಅಲ್ಲದೇ ರಾಜರಾಜೇಶ್ವರಿ ಡ್ರೆಸ್ ಮತ್ತು ಫ್ಯಾನ್ಸಿ ಸ್ಟೋರ್ ನ ಶಟರ್ ನ ಬೀಗ ಮುರಿದು ಅದರೊಳಗಿದ್ದ ಸುಮಾರು 10,000 ರೂಪಾಯಿ ಮೌಲ್ಯದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್, 5, 000ರೂಪಾಯಿ ಮೌಲ್ಯದ ಚಪ್ಪಲಿ ಹಾಗೂ ಕ್ಯಾಶ್ ಡ್ರಾವರ್ ನಲ್ಲಿದ್ದ ನಗದು 3, 500 ರೂಪಾಯಿ ಹಾಗೂ ಸ್ಟೀಲ್ ಕಾಣಿಕೆ ಡಬ್ಬದಲ್ಲಿದ್ದ ನಗದು 10,000 ರೂಪಾಯಿಗಳನ್ನು ಕಳವಗೈಯಲಾಗಿದೆ. ಬಳಿಕ ಬಿಲ್ಡಿಂಗ್ ನ ಸ್ಟಾಕ್ ರೂಮ್ ನ ಅಂಗಡಿಯ ಶಟರಿನ ಬೀಗ ಮುರಿದು ಒಂದು ಪೈಂಟ್ ಡಬ್ಬಿಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಒಟ್ಟು ನಗದು 15,000 ರೂ. ಹಾಗೂ ಇತರ ಸಾಮಾಗ್ರಿಗಳ ಅಂದಾಜು ಮೊತ್ತ 18,500 ರೂಪಾಯಿ ಕಳವು ಮಾಡಿದ್ದು, ಕಳವಾದ ಎಲ್ಲಾ ಸ್ವತ್ತುಗಳ ಅಂದಾಜು 33,500 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  H3N2 ಹಾವಳಿ- ಆರೋಗ್ಯ ಸಿಬ್ಬಂದಿಗಳಿಗೆ ಮಾಸ್ಕ್ ಕಡ್ಡಾಯ ➤ ಸಚಿವ ಸುಧಾಕರ್

error: Content is protected !!
Scroll to Top