‘ಹೆಂಡತಿ ಎಂದರೆ ಭಯ ಸ್ವಾಮಿ, ದಯಮಾಡಿ ಡೈವೋರ್ಸ್ ಕೊಡಿಸಿ’ ► ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೊಡಗಿಕೊಂಡ ಪತಿ ಮಹಾಶಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.30. “ನನಗೆ ನನ್ನ ಹೆಂಡತಿ ಎಂದರೆ ಭಯವಾಗ್ತಾ ಇದೆ. ಅದಕ್ಕೆ ಡೈವೋರ್ಸ್ ನೀಡಬೇಕೆಂದು ಪತಿ ಮಹಾಶಯನೊಬ್ಬ ಹೈಕೋರ್ಟ್ ಜಡ್ಜ್ ಮುಂದೆ ಅಳಲು ತೋಡಿಕೊಂಡಿರುವ ಅಪರೂಪದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ನನ್ನ ಹೆಂಡತಿ ಅಂದರೆ ನನಗೆ ಭಯ. ನನಗೆ ಡೈವೊರ್ಸ್ ಕೊಡಬೇಕೆಂದು ಗಂಡ ಹೈಕೋರ್ಟ್ ಏಕಸದಸ್ಯ ಪೀಠ ಬಳಿ ಮನವಿ ಮಾಡಿದ್ದಾನೆ. ನೀವಿಬ್ಬರೂ ಸ್ವಲ್ಪ ಹೊತ್ತು ಮಾತನಾಡಿ ಎಂದು ಹೈಕೋರ್ಟ್ ಸೂಚಿಸಿದಾಗ ನಾನು ಅವಳ ಜತೆಗೆ ಹೋಗಲ್ಲ ಎಂದು ಆತ ಹೇಳಿದ್ದಾನೆ. ಕಬ್ಬನ್ ಪಾರ್ಕ್’ಗೆ ಹೋಗಿ ಮಾತನಾಡಿ ಎಂದು ಕೋರ್ಟ್ ಸೂಚಿಸಿದಾಗ ನಾನು ಇಲ್ಲಿಯೇ ಮಾತನಾಡುತ್ತೇನೆ ಎಂದು ಭಯ ಬಿದ್ದ ಗಂಡನ ಹೆದರಿಕೆ ಕಂಡು ನ್ಯಾಯಾಧೀಶರಿಗೇ ಆಶ್ಚರ್ಯವಾಗಿದೆ. ಕೋರ್ಟ್ ಕಾರಿಡಾರ್’ನಲ್ಲೇ ಮಾತನಾಡಲು ಜಸ್ಟೀಸ್ ಸೂಚಿಸಿದ್ದಾರೆ. ಕೊನೆಗೆ ಪೊಲೀಸ್ ಕಾವಲಿನಲ್ಲಿ ಕೋರ್ಟ್ ಕಾರಿಡಾರ್ ನಲ್ಲೇ ಮಾತನಾಡಲು ನ್ಯಾಯಾಧೀಶರು ಸೂಚಿಸಿದ್ದು ಪರಸ್ಪರ ಮಾತನಾಡಿಕೊಂಡು ನಿರ್ಧಾರ ತಿಳಿಸಲು ಹೇಳಿದ್ದಾರೆ. ಬೆಂಗಳೂರು ವಾಸಿಗಳಾಗಿರುವ ಗಂಡ-ಹೆಂಡತಿ ವಿಚಿತ್ರ ಪ್ರಸಂಗಕ್ಕೆ ಹೈಕೋರ್ಟ್ ಸಾಕ್ಷಿಯಾಗಿದೆ. ನ್ಯಾಯಮೂರ್ತಿ K.N.ಫಣೀಂದ್ರ ಅವರು ಅರ್ಜಿ ವಿಚಾರಣೆ ನಡೆಸಿದರು.

Also Read  ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಅಪಘಾತ ➤ ಮೂವತ್ತಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

error: Content is protected !!
Scroll to Top