ಪಾನಮತ್ತನಾಗಿ ಪತ್ನಿಯನ್ನು ಚುಂಬಿಸಿದ ಪತಿ- ಪತ್ನಿಯ ಉಡುಗೊರೆ ನೋಡಿ ಪತಿ ಶಾಕ್..!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜು. 24. ವ್ಯಕ್ತಿಯೋರ್ವ ಮದ್ಯಪಾನ ಮಾಡಿ, ಅದರ ನಶೆಯಲ್ಲಿ ತನ್ನ ಹೆಂಡತಿಯನ್ನು ಚುಂಬಿಸಲು ಹೋಗಿದ್ದಾನೆ. ಆದರೆ ಈತ, ತನ್ನ ಹೆಂಡತಿಗೆ ಚುಂಬನ​ ಕೊಟ್ಟಿದ್ದೇ ಕೊಟ್ಟಿದ್ದು. ಪತಿರಾಯ ತನ್ನ ಜನ್ಮದಲ್ಲಿ ಇನ್ನೆಂದೂ ಈ ಘಟನೆಯನ್ನು ಮರೆಯಲಾರದ ಘೋರ ದುರಂತಕ್ಕೆ ಕಾರಣವಾದ ಘಟನೆ ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ನಡೆದಿದೆ.

ಮದ್ಯಪಾನ ಮಾಡುತ್ತಿದ್ದ ದಂಪತಿಗಳಿಬ್ಬರು ಇನ್ನೇನು ರೋಮ್ಯಾನ್ಸ್​ ಮಾಡಲು ಹತ್ತಿರವಾಗಿದ್ದ ಸಂದರ್ಭ ಪತಿ, ತನ್ನ ಪತ್ನಿಗೆ ಚುಂಬಿಸಿದ್ದಾನೆ. ಈ ಸಂದರ್ಭದಲ್ಲಿ ಪತ್ನಿ, ಗಂಡನ ನಾಲಗೆ ಕಚ್ಚಿದ್ದು ಇನ್ನೇನು ತುಂಡೇ ಆಗಿ ಬಿಡುತ್ತದೋ ಏನೋ ಎನ್ನುವ ಹಂತಕ್ಕೆ ತಲುಪಿತ್ತು. ಅಲ್ಲದೇ ಪತಿಯ ನಾಲಿಗೆಯಿಂದ ಒಂದೇ ಸಮನೆ ರಕ್ತ ಹರಿಯಲು ಪ್ರಾರಂಭಿಸಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ತೋಟದ ಕೆಲಸದವನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ➤ ಆರೋಪಿಗೆ ನ್ಯಾಯಾಂಗ ಬಂಧನ

ಘಟನೆಯ ವಿವರ: ಮದ್ಯಪಾನ ಸೇವಿಸಿದ್ದ ಪತಿಯು ತನ್ನ ಹೆಂಡತಿಯನ್ನು ಚುಂಬಿಸಲು ಹೋದಾಗ, ಆತ ಕುಡಿದಿದ್ದರಿಂದ ಆಕೆ ವಿರೋಧಿಸಿದ್ದಳು. ಆದರೆ ಏನನ್ನೂ ಕೇಳದೇ ಮುಂದುವರೆದಿದ್ದ ಪತಿ ಆಕೆಯನ್ನು ಬಲವಂತವಾಗಿ ಚುಂಬಿಸಿದ್ದಾನೆ. ಆಗ ಸಿಟ್ಟುಗೊಂಡ ಹೆಂಡತಿ, ಆಕೆ ಪತಿಯ ನಾಲಿಗೆಯನ್ನು ರಕ್ತ ಹರಿಯುವವರೆಗೂ ಕಚ್ಚಿದ್ದಾಳೆ ಎನ್ನಲಾಗಿದೆ.

error: Content is protected !!
Scroll to Top