ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ➤ ಸ್ಯಾಮ್‌ಸಂಗ್‌’ನ ಮೊಬೈಲ್‌ ಬೆಲೆಯಲ್ಲಿ ಭಾರೀ ಇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.24. ಜನಪ್ರಿಯ ಸ್ಯಾಮ್‌ಸಂಗ್ ಸಂಸ್ಥೆಯ ಗ್ಯಾಲಕ್ಸಿ S ಸರಣಿ ಮೊಬೈಲ್‌ಗಳು ಹೈ ಎಂಡ್ ಮಾದರಿಯ ಫೋನ್‌ಗಳಾಗಿವೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಡಿಮ್ಯಾಂಡ್‌ ಪಡೆದಿರುವ ಈ ಸರಣಿಯ ಫೋನ್‌ಗಳಲ್ಲಿ ಇತ್ತೀಚಿಗಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ 23 ಅಲ್ಟ್ರಾ ಫೋನ್‌ ಗ್ರಾಹಕರನ್ನು ಆಕರ್ಷಿಸಿದೆ.

ಈ ಮೊಬೈಲ್‌ ಇದೀಗ ಸಖತ್‌ ಡಿಸ್ಕೌಂಟ್‌ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು,  ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ 23 ಅಲ್ಟ್ರಾ ಸ್ಮಾರ್ಟ್‌ಫೋನ್‌ ಶೇ. 25% ರಷ್ಟು ರಿಯಾಯಿತಿ ಪಡೆದಿದೆ. 12 GB RAM + 256 GB ಸ್ಟೋರೇಜ್‌ನ ಸ್ಯಾಮ್‌ಸಂಗ್ ಗ್ಯಾಲಕ್ಸಿ 23 ಅಲ್ಟ್ರಾ ಬೆಲೆಯು 1,49,999ರೂ. ಆಗಿದ್ದು, ಈಗ ಆಫರ್‌ನಲ್ಲಿ 1,11,990ರೂ. ಗಳಿಗೆ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಬ್ಯಾಂಕ್‌ ಆಫರ್‌ ಸಹ ಲಭ್ಯವಾಗಲಿವೆ. ಸ್ಯಾಮ್‌ಸಂಗ್‌ನ ಈ ಫ್ಲ್ಯಾಗ್‌ಶಿಫ್‌ ಮೊಬೈಲ್‌ 12GB RAM + 256GB ಮತ್ತು 12GB RAM + 512GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ ಪ್ಯಾಂಟಮ್‌ ಬ್ಲ್ಯಾಕ್‌ ಮತ್ತು ಕ್ರಿಮ್‌ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ.

Also Read  ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಮೊಬೈಲ್‌ 6.8 ಇಂಚಿನ ಎಡ್ಜ್ QHD+ ಡೈನಾಮಿಕ್ ಅಮೋಲೆಡ್‌ 2X ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ ಡೈನಾಮಿಕ್ ರಿಫ್ರೆಶ್ ರೇಟ್ 1-120Hz ಸಪೋರ್ಟ್‌ ಪಡೆದಿದೆ. ಅಲ್ಲದೆ ಗೇಮ್ ಮೋಡ್‌ನಲ್ಲಿ 240Hz ಟಚ್ ಸ್ಯಾಂಪ್ಲಿಂಗ್ ರೇಟಿಂಗ್‌ ಅನ್ನು ಸಪೋರ್ಟ್‌ ಮಾಡಲಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್‌ ಹಾಗೂ ವಿಷನ್ ಬೂಸ್ಟರ್ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ವಿಶೇಷ : ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಅಲ್ಟ್ರಾ ಮೊಬೈಲ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾ 12 ಮೆಗಾಪಿಕ್ಸೆಲ್, ತೃತೀಯ ಕ್ಯಾಮೆರಾ 10 ಮೆಗಾಪಿಕ್ಸೆಲ್ ಹಾಗೂ ನಾಲ್ಕನೇ ಕ್ಯಾಮೆರಾ 10 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿವೆ. ಅಲ್ಲದೇ 12 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.

Also Read  ನಿಮ್ಮ ಕುಟುಂಬದಲ್ಲಿ ಸಮಸ್ಯೆಗಳು ಬರಬಾರದು ಎಂದರೆ ತಪ್ಪದೇ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

error: Content is protected !!
Scroll to Top