ಯೂಟ್ಯೂಬ್ ವಿಡಿಯೋ ನೋಡುವ ಮುನ್ನ ಎಚ್ಚರ – ವಿಡಿಯೋ ಅನುಕರಣೆ ಮಾಡಲು ಹೋಗಿ ಪ್ರಾಣತೆತ್ತ ಬಾಲಕ

(ನ್ಯೂಸ್ ಕಡಬ) newskadaba.com ತೆಲಂಗಾಣ, ಜು. 24. ಬಾಲಕನೋರ್ವ ಯೂಟ್ಯೂಬ್ ವಿಡಿಯೋವೊಂದನ್ನು ಅನುಕರಣೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಸಿರಿಸಿಲ್ಲಾ ಎಂಬಲ್ಲಿ ನಡೆದಿದೆ.

ಮೃತ ಬಾಲಕನನ್ನು 11ರ ಬಾಲಕ ರನೇ ತರಗತಿ ವಿದ್ಯಾರ್ಥಿ ಉದಯ್ ಎಂದು ಗುರುತಿಸಲಾಗಿದೆ. ಈತ ರಾತ್ರಿ ವೇಳೆ ಊಟ ಮುಗಿಸಿ ಕೋಣೆಗೆ ಹೋದವ ಬಾಗಿಲು ಚಿಲಕ ಹಾಕಿಕೊಂಡು ಮೊಬೈಲ್​ ನೋಡಲು ಪ್ರಾರಂಭಿಸಿದ್ದಾನೆ. ಉದಯ್ ನ ಪೋಷಕರು ಎಷ್ಟೇ ಕರೆದರೂ ಉತ್ತರ ನೀಡದೇ ಇದ್ದು, ಕರೆ ಮಾಡಿದಾಗಲೂ ಪ್ರತಿಕ್ರಿಯಿಸಿರಲಿಲ್ಲ. ನಂತರ ಅವರು ಬಾಗಿಲು ಒಡೆದು ನೋಡಿದಾಗ ಆತ ನೇಣುಬಿಗಿದ ಸ್ಥಿತಿಯಲ್ಲಿ ಮೊಳೆಯಲ್ಲಿ ನೇತಾಡುತ್ತಿರುವುದು ಕಂಡುಬಂದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಕಾರಿನೊಳಗೆ ಮಲಗಿದ್ದ ಚಾಲಕ ಉಸಿರುಗಟ್ಟಿ ಮೃತ್ಯು…!

error: Content is protected !!
Scroll to Top