ಅಂಗಾಂಗ ದಾನ ಕ್ಯಾಂಪೇನ್ ಗೆ ಅಂಬಾಸಿಡರ್ ಆಗಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಆಹ್ವಾನಿಸಿದ ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 24. ಡಾ. ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರು ಅವರ ಸಾವಿನ ಬೆನ್ನಲ್ಲೇ ನೇತ್ರದಾನ ಮಾಡಿದ್ದರು. ಅಲ್ಲದೇ ನೇತ್ರದಾನ ಮಾಡುವಂತೆ ಅವರು ಅನೇಕರಿಗೆ ಸ್ಫೂರ್ತಿ ನೀಡಿದ್ದರು. ಈ ಕಾರಣದಿಂದ ಅಶ್ವಿನಿ ಪುನೀತ್ ಅವರಿಗೆ ‘ಅಂಗಾಂಗದಾನ ಕ್ಯಾಂಪೇನ್​’ನ ರಾಯಭಾರಿ ಆಗುವಂತೆ ರಾಜ್ಯ ಸರಕಾರ ಆಹ್ವಾನಿಸಿದೆ.

ಡಾ. ರಾಜ್​ಕುಮಾರ್ ಕುಟುಂಬವು ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದೆ. ಕೇವಲ ನಟನೆ ಮಾತ್ರವಲ್ಲದೇ ಹಲವು ಸಾಮಾಜಿಕ ಕೆಲಸಗಳ ಮೂಲಕವೂ ಈ ಕುಟುಂಬ ಗುರುತಿಸಿಕೊಂಡಿದೆ. ರಾಜ್​ಕುಮಾರ್ ಹಾಗೂ ಪುನೀತ್​ ರಾಜ್​ಕುಮಾರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಈ ಕೆಲಸವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅಂಗಾಂಗದಾನ ಕ್ಯಾಂಪೇನ್​ಗೆ ರಾಯಭಾರಿ ಆಗುವಂತೆ ಅಶ್ವಿನಿ ಅವರಿಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ.

Also Read  ಪ್ರಧಾನಿ ಮೋದಿ ತಾಯಿ ಹೀರಾಬೆನ್ ವಿಧಿವಶ ➤ ಸಿಎಂ ಬೊಮ್ಮಾಯಿ ಸಂತಾಪ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದರಲ್ಲಿ ಅವರು ರಾಜ್​ಕುಮಾರ್ ಕುಟುಂಬದ ಕೊಡುಗೆಯನ್ನು ಸ್ಮರಿಸಿದ್ದಾರೆ ಮತ್ತು ಅಶ್ವಿನಿ ಅವರಿಗೆ ಅಂಬಾಸಿಡರ್ ಆಗಲು ಆಹ್ವಾನ ನೀಡಿರುವ ವಿಚಾರವನ್ನು ಅವರು ತಿಳಿಸಿದ್ದಾರೆ.

ರಾಜ್​ಕುಮಾರ್ ಹಾಗೂ ಅವರ ಕಿರಿಮಗ ಪುನೀತ್ ರಾಜ್​ಕುಮಾರ್, ಅವರ ಮರಣಾನಂತರ ಕಣ್ಣುಗಳನ್ನು ದಾನ ಮಾಡಿ ಮಾದರಿಯಾಗಿದ್ದರು. ಅನೇಕರು ಇವರನ್ನು ಅನುಸರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದ ಆರೋಗ್ಯ ಇಲಾಖೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಅಂಗಾಂಗದಾನ ದಾನ ಕ್ಯಾಂಪೇನ್​ನ ಬ್ರ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಲು ನಿರ್ಧರಿಸಿದೆ’ ಎಂದು ಗುಂಡೂರಾವ್ ಅವರು ತಿಳಿಸಿದ್ದಾರೆ. ಅಂಗಾಂಗದಾನಕ್ಕೆ ಸಹಕರಿಸಿದ 150 ಕುಟುಂಬಗಳನ್ನು ಆರೋಗ್ಯ ಇಲಾಖೆ ಸನ್ಮಾನಿಸಿದೆ.

Also Read  ಬೆಂಗಳೂರು: ಪ್ರಮುಖ ರಸ್ತೆಗಳಲ್ಲಿ 'ಮೆಕ್ಯಾನಿಕಲ್ ಸ್ವೀಪರ್‌' ಬಳಕೆಗೆ ಬಿಬಿಎಂಪಿ ಸಜ್ಜು

error: Content is protected !!
Scroll to Top