ಕಡಬ – ಪಂಜ ಹೆದ್ದಾರಿಯಲ್ಲಿ ರಸ್ತೆಗೆ ನುಗ್ಗಿದ ನದಿ ನೀರು – ಸಂಚಾರದಲ್ಲಿ ಅಡಚಣೆ

(ನ್ಯೂಸ್ ಕಡಬ) newskadaba.com ಕಡಬ, ಜು.23. ಘಟ್ಟದ ಮೇಲೆ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದ ನದಿಗಳು ತುಂಬಿ ಹರಿಯುತ್ತಿದ್ದು, ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.

ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆಗೊಂಡಿದ್ದು, ಹಲವೆಡೆ ನೆರೆ ನೀರು ರಸ್ತೆಗೆ ಬಂದಿವೆ. ಕಡಬದಿಂದ ಪಂಜ ತೆರಳುವ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನೀರು ರಸ್ತೆಗೆ ನುಗ್ಗಿದ್ದು, ಸಂಚಾರದಲ್ಲಿ ತಡೆ ಉಂಟಾಗಿದೆ. ಪಂಜ, ನಿಂತಿಕಲ್ಲು ತೆರಳುವವರು ಎಡಮಂಗಲ ಮಾರ್ಗವಾಗಿ ಬದಲಿ ರಸ್ತೆಯಲ್ಲಿ ತೆರಳಬೇಕಾಗಿದೆ.

error: Content is protected !!
Scroll to Top