ಖ್ಯಾತ ಹಾಸ್ಯ ನಟ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ವಿಧಿವಶ

(ನ್ಯೂಸ್ ಕಡಬ) newskadaba.com  ಅಮೇರಿಕಾ, ಜು. 22. ಕಾಮಿಡಿ ಜಗತ್ತಿನ ಲೆಜೆಂಡ್ ಚಾರ್ಲಿ ಚಾಪ್ಲಿನ್ ಪುತ್ರಿ ನಟಿ ಜೋಸೆಫೀನ್ ಚಾಪ್ಲಿನ್(74) ಕೊನೆಯುಸಿರೆಳೆದಿದ್ದಾರೆ. ಯುಎಸ್ ಮೂಲದ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಜುಲೈ 13 ರಂದು ಪ್ಯಾರಿಸ್‌ನಲ್ಲಿ ಜೋಸೆಫೀನ್ ಚಾಪ್ಲಿನ್ ನಿಧನರಾಗಿರುವುದಾಗಿ ಪ್ರಕಟಿಸಿದ್ದಾರೆ. ನಟಿ ಜೋಸೆಫೀನ್ ಚಾಪ್ಲಿನ್ ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದರು.

ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ’ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು ಜೋಸೆಫೀನ್ ಚಾಪ್ಲಿನ್. ಇವರು ತನ್ನ ತಂದೆಯ ಜೊತೆಗೆ 1952 ಚಿಕ್ಕ ವಯಸ್ಸಿನಲ್ಲಿ ತೆರೆಯ ಮೇಲೆ ಮಿಂಚಿದ್ದರು.  ಜೋಸೆಫೀನ್ ಚಾಪ್ಲಿನ್ ತನ್ನ ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಅಲ್ಲದೇ ಅರ್ಥರ್ ಮತ್ತು ಜೂಲಿಯನ್ ರೋನೆಟ್ ಹಾಗೂ ಅವರ ಒಡಹುಟ್ಟಿದವರಾದ ಮೈಕೆಲ್, ಜೆರಾಲ್ಡಿನ್, ವಿಕ್ಟೋರಿಯಾ, ಜೇನ್, ಆನೆಟ್, ಯುಜೀನ್ ಮತ್ತು ಕ್ರಿಸ್ಟೋಫರ್ ಅಗಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

Also Read  ದೀಪಾವಳಿಯ ದಿನ ಈ ನಿಯಮ ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ

ಜೋಸೆಫೀನ್ ಚಾಪ್ಲಿನ್ ರ ತಂದೆ ಚಾರ್ಲಿ ಚಾಪ್ಲಿನ್ ಹಾಸ್ಯದ ಮೂಲಕ ಜಗತ್ತಿನ ಸಿನಿ ಪ್ರೀಯರ ಮನ ಗೆದ್ದಿದ್ದರು. ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತನ್ನ ಮೂಖ ನಟನೆಯಿಂದ ಚಾರ್ಲಿ ಚಾಪ್ಲಿನ್ ಜಗತ್ತಿನ ಸಿನಿಪ್ರಿಯರ ಹೃದಯ ಗೆದ್ದಿದ್ದರು.

error: Content is protected !!
Scroll to Top