ಕಾರ್ಗಿಲ್ ನಲ್ಲಿ ದೇಶ ಕಾಪಾಡಿದ ನನಗೆ ಪತ್ನಿಯನ್ನು ಕಾಪಾಡಲು ಆಗಲಿಲ್ಲ- ದುಃಖ ತೋಡಿಕೊಂಡ ನಗ್ನ ಸಂತ್ರಸ್ತೆಯ ಪತಿ

(ನ್ಯೂಸ್ ಕಡಬ) newskadaba.com ಇಂಫಾಲ್, ಜು. 22. ಮಣಿಪುರದ ಹಿಂಸಾಚಾರ ಖಂಡಿಸಿ ದೇಶದ ಮೂಲೆ ಮೂಲೆಯಲ್ಲೂ ಪ್ರತಿಭಟನೆಗಳು ನಡೆಯುತ್ತಿದೆ. ಇದೀಗ ಮಹಿಳೆಯರಿಬ್ಬರ ನಗ್ನ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಘಟನೆ ಕುರಿತು ಸಂತ್ರಸ್ತೆಯೋರ್ವರ ಪತಿ ನಿವೃತ್ತ ಯೋಧ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶದ ಗಡಿಯನ್ನು ಕಾಪಾಡಿದ್ದೆ. ಶ್ರೀಲಂಕಾದಲ್ಲಿ ನಡೆದ ಭಾರತೀಯ ಸೇನೆಯ ಶಾಂತಿ ಸ್ಥಾಪನೆ ಆಂದೋಲನದಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ್ದೆ. ಆದರೆ ದೇಶವನ್ನು ಉಳಿಸಿದ ನನಗೆ ನನ್ನ ಪತ್ನಿ, ಮನೆ ಹಾಗೂ ಗ್ರಾಮಸ್ಥರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ವರದಿಯಾಗಿದೆ.

 

ಅಸ್ಸಾಂ ರಿಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿರುವ ಈ ಯೋಧ, ಪಾಕಿಸ್ತಾನ ವಿರುದ್ಧ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು. ಭಾರತದ ಅಭೂತಪೂರ್ವ ಯುದ್ಧ ಗೆಲುವಿನಲ್ಲಿ ಕಾರ್ಗಿಲ್ ಕೂಡ ಒಂದು. ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಯೋಧ, ತನ್ನ ಪತ್ನಿ, ಮನೆ ಕುಟುಂಬಸ್ಥರನ್ನು ಕಾಪಾಡಲು ಸಾಧ್ಯವಾಗಲಿಲ್ಲ ಅನ್ನೋ ಕೊರಗು ಕಾಡುತ್ತಿದೆ ಎಂದು ಹೇಳಿದ್ದಾರೆ.

Also Read  ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ - ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

ಘಟನೆಯ ವೇಳೆ ಪೊಲೀಸರು ಸ್ಥಳದಲ್ಲಿದ್ದು, ಅನಾಚಾರವನ್ನು ತಡೆಯುವ ಎಲ್ಲಾ ಸಾಧ್ಯತೆಗಳು ಅವರ ಕೈಯಲ್ಲಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಘಟನೆಯ ಹಿಂದಿರುವ ಎಲ್ಲಾ ದುಷ್ಕರ್ಮಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟನೆ ಮರುಕಳಿಸದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತಿದ್ದು, 100ಕ್ಕೂ ಹೆಚ್ಚು ಅಮಾಯಕರು ಬಲಿಯಾಗಿದ್ದಾರೆ. ಮಹಿಳೆ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಆದರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲಗೊಂಡಿದೆ. ಇದೀಗ ವಿಪಕ್ಷಗಳು ಸೇರಿದಂತೆ ಹಲವು ನಾಯಕರು ಕೇಂದ್ರ ಹಾಗೂ ಮಣಿಪುರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

error: Content is protected !!
Scroll to Top