ಸುಳ್ಯ: ತಲವಾರು ಹಿಡಿದು ಹಲ್ಲೆಗೆ ಯತ್ನ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 22. ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ತಲವಾರು ಹಿಡಿದು ಹಲ್ಲೆಗೆ ಯತ್ನಿಸಿದ ಘಟನೆ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ನಡೆದಿದೆ.

ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ಪೆಟ್ರೋಲ್ ಪಂಪ್ ಬಳಿ ಇರುವ ನಿಸರ್ಗ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯವಿರುವ ಪ್ರವೀಣ ಎಂಬವರು ಇನ್ನೊರ್ವ ನಿವಾಸಿ ಧರ್ಮಲಿಂಗಂ ಎಂಬವರೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿ ತಮ್ಮ ವಾಹನದಿಂದ ತಲವಾರು ತೆಗೆದು ಹಲ್ಲೆ ನಡೆಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ತಡೆದಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಧರ್ಮಲಿಂಗಂ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಕೇಸು ದಾಖಲಾಗಿದೆ ಎಂದು ತಿಳಿದುಬಂದಿದೆ.

Also Read  18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಗೆ ವಿಷ ಕುಡಿಸಿದ ದುಷ್ಕರ್ಮಿಗಳು

error: Content is protected !!
Scroll to Top