ಸಬ್ಸಿಡಿ ದರ ಪ್ರತೀ ಕೆ.ಜಿ.ಗೆ 70ರೂ.ಗೆ ಇಳಿಕೆ ಕಂಡ ‘ಕೆಂಪುಸುಂದರಿ’

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು. 21. ಸಾಂಬಾರು ಪದಾರ್ಥಗಳಲ್ಲಿ ಅಗತ್ಯ ವಸ್ತುವಾಗಿರುವ ಟೊಮೆಟೊ ದರ ದುಬಾರಿಯಾದ್ದರಿಂದ ಜನರಿಗೆ ಪರಿಹಾರವನ್ನು ಒದಗಿಸಲು ಕೇಂದ್ರ ಸರಕಾರವು ಗುರುವಾರದಿಂದ ಪ್ರತೀ ಕೆ.ಜಿ.ಗೆ ಹಿಂದಿನ 80 ರೂ.ಗಳ ಬದಲು 70 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟವನ್ನು ಮಾಡುತ್ತಿದೆ.

ಕೇಂದ್ರವು ದಿಲ್ಲಿ-ಎನ್ಸಿಆರ್ ಪ್ರದೇಶ ಮತ್ತು ಇತರ ಕೆಲವು ಪ್ರಮುಖ ಗರಗಳಲ್ಲಿ ನಫೆಡ್ ಮತ್ತು ಎನ್ಸಿಸಿಎಫ್ ಸಹಕಾರಿ ಸಂಸ್ಥೆಗಳ ಮೂಲಕ ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಮಾಡಲು ಪ್ರಾರಂಭಿಸಿದೆ. ದೇಶಾದ್ಯಂತ ಟೊಮೆಟೊದ ಸರಾಸರಿ ಚಿಲ್ಲರೆ ಮಾರಾಟ ಪ್ರತೀ ಕೆ.ಜಿ.ಗೆ 120 ರೂ.ಗಳಾಗಿದ್ದು, ಕೆಲವು ನಗರಗಳಲ್ಲಿ ದರ 245 ರೂ.ವರೆಗೆ ಏರಿಕೆಯಾಗಿದೆ. ದಿಲ್ಲಿಯಲ್ಲಿ ಪ್ರತೀ ಕೆ.ಜಿ.ಟೊಮೆಟೊ ದರ 120 ರೂ.ಗೆ ಇಳಿದಿದೆ. ಎನ್ಸಿಸಿಎಫ್ ಮತ್ತು ನಫೆಡ್ ಖರೀದಿಸಿದ ಟೊಮೆಟೋವನ್ನು ಆರಂಭದಲ್ಲಿ ಪ್ರತಿ ಕೆ.ಜಿ.ಗೆ 90 ರೂ.ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು, ಜು.16ರಿಂದ ದರವನ್ನು 80 ರೂ.ಗೆ ತಗ್ಗಿಸಲಾಗಿತ್ತು.

Also Read  5 ವರ್ಷದ ಹಿಂದೆ ನಡೆದಿದ್ದ ಬುಡಕಟ್ಟು ಯುವಕನ ಕೊಲೆ ಪ್ರಕರಣ ➤ 14 ಮಂದಿ ದೋಷಿ

ಸರಕಾರದ ನಿರ್ದೇಶನದ ಪ್ರಕಾರ ಇವೆರಡೂ ಸಹಕಾರ ಸಂಸ್ಥೆಗಳು ಆಂಧ್ರಪ್ರದೇಶದ ಮದನಪಲ್ಲಿ, ಕರ್ನಾಟಕದ ಕೋಲಾರ ಮತ್ತು ಮಹಾರಾಷ್ಟ್ರದ ಸಂಗನೇರಿಯಿಂದ ಟೊಮೆಟೊಗಳನ್ನು ಖರೀದಿಸುತ್ತಿವೆ. ಸಾಮಾನ್ಯವಾಗಿ ಉತ್ಪಾದನೆ ಕಡಿಮೆಯಿರುವ ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಅವಧಿಗಳಲ್ಲಿ ಟೊಮೆಟೊ ದರಗಳಲ್ಲಿ ಏರಿಕೆಯಾಗುತ್ತದೆ. ಮುಂಗಾರು ಮಳೆಯಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವು ದರಗಳ ತೀವ್ರ ಏರಿಕೆಗೆ ಕಾರಣವಾಗಿದೆ.

error: Content is protected !!
Scroll to Top