ಬೀದಿಬದಿ ವ್ಯಾಪಾರಿಗಳ ನಿಯಂತ್ರಣಕ್ಕೆ ಕೇಂದ್ರ ಚಿಂತನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 21. ಬೀದಿ ಬದಿಯ ತಿನಿಸುಗಳಿಗೆ ಗುಣಮಟ್ಟ ನಿಗದಿ ಮಾಡುವ ಉದ್ದೇಶದಿಂದ, ಬೀದಿ ಬದಿ ವ್ಯಾಪಾರಿಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಕೇಂದ್ರವು ಚಿಂತನೆ ನಡೆಸಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಕಾರ್ಯದರ್ಶಿ ರಾಜೇಶ್‌ ಕುಮಾರ್ ಸಿಂಗ್ ಹೇಳಿದ್ದಾರೆ.

ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದು ಬಹಳ ಕಷ್ಟದ ಕೆಲಸವಾದರೂ ಈ ಬಗ್ಗೆ ಗಮನ ಹರಿಸಲೇಬೇಕು. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಿದರೆ ಸಾಕಾಗುತ್ತದೆಯೋ ಅಥವಾ ಕಠಿಣ ಕ್ರಮಕ್ಕೆ ಮುಂದಾಗಬೇಕೋ ಎಂಬುದನ್ನು ಪರಿಶೀಲಿಸಬೇಕಿದೆ ಎಂದಿದ್ದಾರೆ.

ಭಾರತಕ್ಕೆ ಬರುವ ವಿದೇಶಿಯರು, ‘ಭಾರತದಲ್ಲಿ ಅತ್ಯುತ್ತಮ ತಿನಿಸುಗಳು ಸಿಗುವುದು ಬೀದಿ ಬದಿ ವ್ಯಾ‍‍ಪಾರಿಗಳಲ್ಲಿ’ ಎಂಬ ಮಾತು ಕೇಳುತ್ತಿರುತ್ತಾರೆ. ಹೀಗಾಗಿ, ಈ ವ್ಯಾಪಾರಿಗಳಿಗೆ ಅನ್ವಯವಾಗುವ ಕೆಲವು ನಿಯಮಗಳನ್ನು ರೂಪಿಸಬೇಕಾಗಿದೆ ಎಂದು ಸಿಂಗ್ ಹೇಳಿದ್ದಾರೆ.

error: Content is protected !!

Join the Group

Join WhatsApp Group