ಪಡಿತರ ಚೀಟಿಯಲ್ಲಿ ಪುರುಷ ಯಜಮಾನರಿದ್ದಲ್ಲಿ ಬದಲಾಯಿಸುವುದು ಹೇಗೆ- ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 21. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ 2000 ರೂಪಾಯಿಯನ್ನು ನೀಡಲಾಗುತ್ತದೆ. ಈ ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಆದರೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಬಹುತೇಕ ಪಡಿತರ ಚೀಟಿಯಲ್ಲಿ ಪುರುಷರನ್ನು ಮನೆಯ ಯಜಮಾನ ಎಂದು ತೋರಿಸಲಾಗಿದೆ. ಹೀಗಿದ್ದಲ್ಲಿ ಮಹಿಳಾ ಸದಸ್ಯೆಯನ್ನು ಮನೆಯ ಯಜಮಾನಿ ಎಂದು ಹೇಗೆ ಬದಲಾವಣೆ ಮಾಡುವುದು ಎಂಬ ಮಾಹಿತಿ ಇಲ್ಲಿದೆ.

ಮೊದಲಿಗೆ ಸಮೀಪದ ಪಡಿತರ ಚೀಟಿ ಸೇವಾಕೇಂದ್ರಗಳಿಗೆ ಭೇಟಿ ನೀಡಿ, ಮುಖ್ಯಸ್ಥರ ಹೆಸರು ಬದಲಾವಣೆ ಮಾಡಲು ಅರ್ಜಿಯೊಂದನ್ನು ಭರ್ತಿ ಮಾಡಿ

ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳನ್ನು ಕೂಡಾ ಸಲ್ಲಿಸಿ.

ಬಯೋಮೆಟ್ರಿಕ್‌ ದೃಡೀಕರಣದ ಮೂಲಕ ದಾಖಲೆಗಳನ್ನು ದೃಢೀಕರಿಸಿ

ಪಡಿತರ ಸೇವಾ ಕೇಂದ್ರದಲ್ಲಿ ಎಲ್ಲ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ.

Also Read  ಕಡಬದಲ್ಲಿ ಏರ್ ಟೆಲ್ ಸೇವಾ ಕೇಂದ್ರ 'ಭಾಗ್ಯಲಕ್ಷ್ಮೀ ಕಮ್ಯುನಿಕೇಷನ್' ಶುಭಾರಂಭ

ಅಲ್ಲಿ ನೀಡಲಾಗುವ ಸ್ವೀಕೃತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿರಿ

ಅದಾದ ಬಳಿಕ ಆಹಾರ ಕಚೇರಿಯಲ್ಲಿ ನಿಮಗೆ ಎಸ್‌ಎಂಎಸ್ ಬರಲಿದೆ

ಎಸ್‌ಎಂಎಸ್‌ ಬಂದ ಬಳಿಕ ನಿಮ್ಮಲ್ಲಿರುವ ಸ್ವೀಕೃತಿ ಪತ್ರ ಬಳಸಿಕೊಂಡು ನಿಮ್ಮ ಪಡಿತರ ಚೀಟಿಯನ್ನು ಪ್ರಿಂಟ್‌ ತೆಗೆದುಕೊಳ್ಳಬಹುದು.

ಆನ್‌ಲೈನ್‌ನಲ್ಲಿ ರೇಷನ್‌ ಕಾರ್ಡ್ ತಿದ್ದುಪಡಿ ಹೇಗೆ?

ಮೊದಲಿಗೆ https://ahara.kar.nic.in/ಗೆ ಲಾಗ್ ಇನ್ ಆಗಿ, ಮೇನ್ ಪೇಜ್‌ನಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್‌ ಮಾಡಿ, ಅದಾದ ಬಳಿಕ ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅಲ್ಲಿ ಕ್ಲಿಕ್‌ ಮಾಡಿರಿ, ಈಗ ಹೊಸ ಪೇಜ್ ತೆರೆಯಲಿದೆ. ನಿಮ್ಮ ಜಿಲ್ಲೆಗೆ ಅನುಗುಣವಾಗಿ ಕಾಣಿಸುವ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ, ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ. ಅರ್ಜಿ ಸಲ್ಲಿಕೆಯ ರಿಜಿಸ್ಟರ್‌ ನಂಬರ್‌ ಸಿಗಲಿದೆ. ಈ ನಂಬರ್‌ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್‌ ಅನ್ನು ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿದೆ.

Also Read  ಕಡಬ: ಸೌಭಾಗ್ಯ ಡ್ರೈವಿಂಗ್ ಸ್ಕೂಲ್ ಶುಭಾರಂಭ

ಬೇಕಾದ ದಾಖಲೆಗಳು:-
ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಬೇಕಾದರೆ ಕುಟುಂಬದ ಮುಖ್ಯಸ್ಥ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣಪತ್ರ, ಪಡಿತರ ಚೀಟಿ, ಅರ್ಜಿದಾರರ ವಿಳಾಸದ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆ, ಅರ್ಜಿದಾರರ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಪ್ರತಿ ಅಥವಾ ಇತರೆ ದಾಖಲೆಗಳು, ಹೊಸ ಕುಟುಂಬ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್ ಬೇಕಾಗುತ್ತದೆ.

error: Content is protected !!
Scroll to Top