“ಸ್ಟೋರಿ ಆಫ್ ಸೌಜನ್ಯ” ಟೈಟಲ್ ನೋಂದಣಿ- ಸಿನಿಮಾ ಆಗಲಿದೆ ಸೌಜನ್ಯ ಸಾವಿನ ಕಥೆ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜು. 21. ಈಗಾಗಲೇ ನೈಜ ಘಟನೆಯಾಧಾರಿತ ಸಿನೆಮಾಗಳು ಮೂಡಿಬಂದಿತ್ತು. ಇದೀಗ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದನ್ನೇ ನೆಪವಿಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.


ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಎಂಬಾಕೆಯನ್ನು 2012ರ ಅಕ್ಟೋಬರ್ 9ರಂದು ಅಪಹರಿಸಲಾಗಿತ್ತು. ಅಂದು ರಾತ್ರಿ ಮಿಸ್ಸಿಂಗ್ ಕೇಸ್ ಕೂಡಾ ದಾಖಲಾಗಿತ್ತು. 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಮಣ್ಣಸಂಖ ಎಂಬಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತಲ್ಲದೇ ಆಕೆಯ ಮೇಲೆ ಅತ್ಯಾಚಾರ ಕೂಡಾ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿದ್ದ ಸಂತೋಷ್ ರಾವ್ ಅವರನ್ನು ನಿರ್ದೋಷಿ ಎಂದು ಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು.

Also Read  ಆತ್ಮ ನಿರ್ಭರ ಭಾರತ ➤ ಉದ್ಯೋಗ ನೈಪುಣ್ಯ ತರಬೇತಿ ಶಿಬಿರಕ್ಕೆ ಪಂಜದಲ್ಲಿ ಚಾಲನೆ

 

ಈ ನೈಜ ಘಟನೆಯನ್ನು ಆಧರಿಸಿ ಸೌಜನ್ಯ ಅವರ ಸಿನಿಮಾ ಮಾಡಲಾಗುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಜಿಕೆ ವೆಂಚರ್ಸ್ ‘ಸ್ಟೋರಿ ಆಫ್ ಸೌಜನ್ಯ’ ಎಂಬ ಟೈಟಲ್ ನೋಂದಣಿ ಮಾಡಿಸಿದೆ. ಈ ಚಿತ್ರ ಕನ್ನಡದಲ್ಲಿ ಸಿದ್ದವಾಗಲಿದ್ದು, ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

error: Content is protected !!
Scroll to Top