ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಗುದ್ದಿ ಜಖಂಗೊಂಡ ಘಟನೆ ಗುರುವಾರದಂದು ನಗರದ ಪಿವಿಎಸ್‌ ಬಳಿಯ ಎಂ.ಜಿ. ರೋಡ್‌ನ‌ಲ್ಲಿ ನಡೆದಿದೆ.


ಕಾಸರಗೋಡು- ಮಂಗಳೂರು ನಡುವೆ ಸಂಚರಿಸುತ್ತಿದ್ದ ಬಸ್‌, ಇನ್ನೊಂದು ಕೆಎಸ್‌ಆರ್‌ಟಿಸಿಯ ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕಾಂಪಿಟೀಶನ್‌ ಮಾಡಿಕೊಂಡು ಪಿವಿಎಸ್‌ ಜಂಕ್ಷನ್‌ ನಿಂದ ಎಂ.ಜಿ ರಸ್ತೆಗೆ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಬಂದಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಈ ಸಂದರ್ಭ ಪಕ್ಕದಲ್ಲಿದ್ದ ಬೈಕ್‌ ಕೂಡಾ ಮಗುಚಿ ಬಿದ್ದಿದೆ. ದ್ವಿಚಕ್ರ ವಾಹನದಲ್ಲಿ ಯಾರೂ ಇಲ್ಲದಿದ್ದುದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

Also Read  ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ - ಸವಾರನಿಗೆ ಗಾಯ


ಘಟನಾ ಸ್ಥಳಕ್ಕೆ ಸಂಚಾರ ವಿಭಾಗದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದಕ್ಕೆ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಹಾಗೇ ಕಳುಹಿಸಿದ್ದು, ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

error: Content is protected !!
Scroll to Top