ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಬೆಂಕಿಯುಂಟಾಗಿ ಕಾರು ಭಸ್ಮ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜ.28. ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ತನೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರು ಉರಿದು ಭಸ್ಮವಾದ ಘಟನೆ ಕಡೂರಿನಲ್ಲಿ ಭಾನುವಾರ ಸಂಜೆ ನಡೆದಿದೆ.

ಸಖರಾಯಪಟ್ಟಣ ನಿವಾಸಿ ಲೋಕೇಶ್ ಎಂಬವರು ಇತರ ನಾಲ್ವರೊಂದಿಗೆ ತನ್ನ ಫೋರ್ಡ್ ಕಂಪೆನಿಗೆ ಸೇರಿದ ಕಾರಿನಲ್ಲಿ ತರೀಕೆರೆಯಿಂದ ಮನೆ ಕಡೆಗೆ ತೆರಳುತ್ತಿದ್ದ ವೇಳೆ ಕಾರಿನ ಬಾನೆಟ್‍ನ ಮೇಲೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಕಾರಿನಿಂದ ಕೆಳಗಿಳಿದ ಲೋಕೇಶ್ ಹಾಗೂ ಇತರರು ನೋಡನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಅದಾಗಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

Also Read  ರಾಜ್ಯದಲ್ಲಿ 'ಮತಾಂತರ ನಿಷೇಧ ಕಾಯ್ದೆ' ರದ್ದು ➤ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ

error: Content is protected !!
Scroll to Top