ಹಾಡಹಗಲೇ ಕ್ಯಾಷಿಯರ್ ನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 20. ಕಂಪನಿಯೊಂದರ ಸಿಇಒ ಹಾಗೂ ಎಂಡಿ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಹಾಡಹಗಲೇ ಭೀಕರ ಮರ್ಡರ್ ನಡೆದಿದ್ದು, ಹೋಟೆಲ್ ಗೆ ನುಗ್ಗಿದ ದುಷ್ಕರ್ಮಿಯೋರ್ವ ಕ್ಯಾಶಿಯರ್ ನನ್ನು ಬರ್ಬರ ಹತ್ಯೆ ಮಾಡಿದ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯ ಎಂಬಲ್ಲಿ ನಡೆದಿದೆ.

ಮುರುಗೇಶ್ ಪಾಳ್ಯದಲ್ಲಿನ ಹೋಟೆಲೊಂದಕ್ಕೆ ನುಗ್ಗಿದ ಅದೇ ಹೋಟೆಲ್ ನಲ್ಲಿ ಹೌಸ್ ಕೀಪರ್ ಆಗಿ ಕೆಲಸಕ್ಕಿದ್ದ ಅಭಿಷೇಕ್ ಎಂಬಾತ ಕ್ಯಾಶಿಯರ್ ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Also Read  15ನೇ ಬಜೆಟ್ ಮಂಡನೆ- ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ ಹಾಗೂ ವಕ್ಫ್ ಗೆ 100 ಕೋಟಿ ರೂ. ಘೋಷಣೆ


ಕುಡಿದ ಅಮಲಿನಲ್ಲಿ ದೊಣ್ಣೆಯಿಂದ ಹೊಡೆದು ಹೌಸ್ ಕೀಪರ್ ಅಭಿಷೇಕ್ ಬರ್ಬರವಾಗಿ ಕ್ಯಾಷಿಯರ್ ನ ಕೊಲೆ ಮಾಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕಂಪನಿಗೆ ನುಗ್ಗಿದ ದುಷ್ಕರ್ಮಿಗಳು ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.

error: Content is protected !!
Scroll to Top