ಮತ್ತೊಂದು ಯಶಸ್ವಿ ಹೆಜ್ಜೆಯತ್ತ ‘ಚಂದ್ರಯಾನ- 3’ – 3ನೇ ಕಕ್ಷೆಗೆ ಎಂಟ್ರಿ ಕೊಟ್ಟ ಬಾಹ್ಯಾಕಾಶ ನೌಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 20. ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, ‘ಚಂದ್ರಯಾನ-3’ ನೌಕೆ 3ನೇ ಕಕ್ಷೆಗೆ ಎಂಟ್ರಿ ಕೊಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಇಸ್ರೋ ಸಂಸ್ಥೆಯು ಮಂಗಳವಾರದಂದು ಚಂದ್ರಯಾನ -3 ಗಗನನೌಕೆಯ ಮೂರನೇ ಕಕ್ಷೆಯನ್ನು ಹೆಚ್ಚಿಸುವ ತಂತ್ರವನ್ನು ಯಶಸ್ವಿಯಾಗಿ ನಡೆಸಿತು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.


ಯೋಜನೆಯ ಪ್ರಕಾರ ‘ಚಂದ್ರಯಾನ-3’ ಬಾಹ್ಯಾಕಾಶ ನೌಕೆಯು 51,400 ಕಿ.ಮೀ x 228 ಕಿಮೀ ಕಕ್ಷೆ ತಲುಪಿದೆ. ಇಂದು ನೌಕೆಯನ್ನು ಮತ್ತೊಂದು ಹಂತಕ್ಕೆ ಏರಿಸಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜುಲೈ 14 ರಂದು ಚಂದ್ರಯಾನ-3 ನೌಕೆ ಉಡಾವಣೆ ಮಾಡಲಾಗಿತ್ತು.

Also Read  ಅಕ್ರಮ‌ ಮರಳು ಸಾಗಾಟ - ಟಿಪ್ಪರ್ ಪೊಲೀಸ್ ವಶಕ್ಕೆ

error: Content is protected !!
Scroll to Top