ಲಾರಿಗೆ ಢಿಕ್ಕಿ ಹೊಡೆದ ಬೈಕ್ ► ಮಗು ಸೇರಿ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಕೋಲಾರ, ಜ.28. ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಮಗು ಸೇರಿದಂತೆ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಶಾಂತಿಪುರಂ ಬಳಿ ನಡೆದಿದೆ.

ಮೃತರನ್ನು ಗುಡಪಲ್ಲಿ ನಿವಾಸಿಗಳಾದ ನಾರಾಯಣಮ್ಮ(40), ಮಮತ(24), ಹಾಗೂ 2 ವರ್ಷದ ಪುಟಾಣಿ ಯಶ್ವಂತಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬೈಕ್ ಸವಾರ ರಾಜಪ್ಪರನ್ನು ಕುಪ್ಪಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಬೈಕಿನಲ್ಲಿ ಶಾಂತಿಪುರಂನಿಂದ ಕುಪ್ಪಂ ಕಡೆಗೆ ತೆರಳುತ್ತಿದ್ದ ಇವರ ಬೈಕ್ ರಾಚಪ್ಪನ ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Also Read  ವರ್ಗಾವಣೆ ನಿರೀಕ್ಷೆಯಲ್ಲಿದ್ದವರಿಗೆ ಬಿಗ್‌ ಶಾಕ್ ಕೊಟ್ಟ 'ಸಿಎಂ ಬೊಮ್ಮಾಯಿ' ➤ ಯಾವುದೇ ಪ್ರಸ್ತಾವನೆ ಸಲ್ಲಿಸದಂತೆ ಆದೇಶ !

error: Content is protected !!
Scroll to Top