ಪ್ರಾಮಾಣಿಕ ಗೃಹರಕ್ಷಕರೇ ದೇಶದ ನಿಜವಾದ ಆಸ್ತಿ- ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 20.  ಶ್ರೀಮತಿ ಸರಿತಾ, ಮೆ.ನಂ 248 ಇವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸುರತ್ಕಲ್ ಘಟಕದ ಗೃಹರಕ್ಷಕಿಯಾಗಿದ್ದು, 2015 ರಲ್ಲಿ ಗೃಹರಕ್ಷಕದಳದ ಸದಸ್ಯನಾಗಿ ಸೇರ್ಪಡೆಯಾಗಿ, 8 ವರ್ಷಗಳಿಂದ ಸ್ವಾರ್ಥ ರಹಿತ ನಿಷ್ಕಾಮ ಸೇವೆಯನ್ನು ಸಲ್ಲಿಸುತ್ತಾ ಬಂದಿರುತ್ತಾರೆ.

ಇವರ ಸೇವಾ ಅವಧಿಯಲ್ಲಿ ಅನೇಕ ಬಂದೋಬಸ್ತು ಕರ್ತವ್ಯ, ಕವಾಯತು, ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಇವರು ಒರ್ವ ದಕ್ಷ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದು, ಸುರತ್ಕಲ್ ಗೃಹರಕ್ಷಕದಳದ ಸಕ್ರಿಯ ಸದಸ್ಯರಾಗಿರುತ್ತಾರೆ. ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಅವರನ್ನು ಸನ್ಮಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು. ಒರ್ವ ಪದವೀದರ ಮಹಿಳೆ ಆಗಿರುವ ಸರಿತಾ, ಗೃಹರಕ್ಷಕಿಯಾಗಿ ಮನೆಯನ್ನು ನಡೆಸುವುದರ ಜೊತೆಗೆ ಗೃಹರಕ್ಷಕದಳದ ಸದಸ್ಯರಾಗಿ ಸಮಾಜ ಮತ್ತು ದೇಶದ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಸಮಾದೇಷ್ಟರು ನುಡಿದರು.

Also Read  ಪ್ರವಾಸಿಗರ ರಕ್ಷಣೆಗೆ ನಮ್ಮ ಆಧ್ಯತೆ ➤ ಡಾ|| ಚೂಂತಾರು

ಬುಧವಾರದಂದು ಸುರತ್ಕಲ್ ಗೃಹರಕ್ಷಕದಳದ ಕಛೇರಿಗೆ ಭೇಟಿ ನೀಡಿ, ವಾರದ ಕವಾಯತನ್ನು ವೀಕ್ಷಿಸಿದರು ಮತ್ತು ಇದೇ ಸಂದರ್ಭದಲ್ಲಿ ಶ್ರೀಮತಿ ಸರಿತಾ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್, ಗೃಹರಕ್ಷಕರಾದ ಸುನಿಲ್, ಪಡಿಯಪ್ಪ, ಆನಂದ, ಯಮನೂರ, ದಿವಾಕರ್, ಮನೋರಮ, ಸಂಧ್ಯಾ, ಶೃತಿ, ರಾಣಿ, ಜಯಂತಿ, ಲಲಿತಾ, ಗೀತಾ, ಭಾರತಿ ಮುಂತಾದವರು ಉಪಸ್ಥಿತರಿದ್ದರು.

error: Content is protected !!
Scroll to Top