(ನ್ಯೂಸ್ ಕಡಬ) newskadaba.com ಮಂಗಳೂರು, ಜು. 20. ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಜಿಲ್ಲೆಯಲ್ಲಿ ಸಾಲ ಮರುಪಾವತಿ ಅಭಿಯಾನ ಆರಂಭಗೊಂಡಿದ್ದು, ಸಾಲ ಮರುಪಾವತಿಗೆ ಬಾಕಿ ಇರುವ ಫಲಾನುಭವಿಗಳು ನಿಗದಿಪಡಿಸಿರುವ ದಿನದಂದು ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಕಚೇರಿಯಲ್ಲಿ ಪಾವತಿಸಲು ಕೋರಲಾಗಿದೆ.
ಪ್ರತಿ ತಿಂಗಳ 4ರಂದು ಬಂಟ್ವಾಳ ತಾಲೂಕಿನ ಬಿಸಿ ರೋಡ್‍ನಲ್ಲಿರುವ ಭಾರತ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ದೂರವಾಣಿ ಸಂಖ್ಯೆ 082552-32470, ಪ್ರತಿ ತಿಂಗಳ 7ರಂದು ವಿಟ್ಲದ ಪ್ರವಾಸಿ ಮಂದಿರದಲ್ಲಿ, ಪ್ರತಿ ತಿಂಗಳ 10ರಂದು ಬೆಳ್ತಂಗಡಿ ತಾಲೂಕಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕಟ್ಟಡದಲ್ಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ದೂರವಾಣಿ ಸಂಖ್ಯೆ 08256-295335, ಪ್ರತಿ ತಿಂಗಳ 15ರಂದು ಕಡಬ ತಾಲೂಕಿನ ಆಡಳಿತ ಕಚೇರಿಯಲ್ಲಿ, ಪ್ರತಿ ತಿಂಗಳ 15ರಂದು ಸುಳ್ಯ ತಾಲೂಕಿನ ಕೆಸಿ ರಸ್ತೆಯಲಿರುವ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ದೂರವಾಣಿ ಸಂಖ್ಯೆ 082857-230666, ಪ್ರತಿ ತಿಂಗಳ 20ರಂದು ಪುತ್ತೂರು ತಾಲೂಕಿನ ತಾಲೂಕು ಪಂಚಾಯತ್ ಸಾಮರ್ಥ ಸೌಧ ಕಟ್ಟಡದ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಲ್ಲಿ ದೂರವಾಣಿ ಸಂಖ್ಯೆ 08251-237078, ಪ್ರತಿ ತಿಂಗಳ 22ರಂದು ಉಲ್ಲಾಳದ ಪುರಸಭೆಯಲ್ಲಿ, ಪ್ರತಿ ತಿಂಗಳ 25ರಂದು ಮೂಡಬಿದ್ರೆಯ ತಾಲೂಕು ಪಂಚಾಯತ್ ಹತ್ತಿರದ ಪ್ರವಾಸಿ ಮಂದಿರದಲ್ಲಿ, ಪ್ರತಿ ತಿಂಗಳ 28ರಂದು ಮುಲ್ಕಿಯ ನಗರಸಭೆ ಕಾರ್ನಾಡುನಲ್ಲಿ ಪಾವತಿಸಲು ಸೂಚಿಸಲಾಗಿದೆ.
ಸರ್ಕಾರಿ ರಜೆ ಹೊರತುಪಡಿಸಿ ಎಲ್ಲ ದಿನಗಳಲ್ಲಿ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಎರಡನೇ ಮಹಡಿಯಲ್ಲಿರುವ ಮೌಲಾನ ಆಜಾದ್ ಭವನದಲ್ಲಿ ಪಾವತಿಸಬಹುದಾಗಿದೆ. ದೂರವಾಣಿ ಸಂಖ್ಯೆ 0824-2951644/8277944214/9845964651 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.