ಸುಳ್ಯ: ಬಾಡಿಗೆಗೆ ವಾಹನ ಗೊತ್ತುಪಡಿಸಿ ಅಪರಿಚಿತ ಪರಾರಿ- ಮೂವರು ಗೂಡ್ಸ್ ಚಾಲಕರಿಗೆ ವಂಚನೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 19. ಬೆಂಗಳೂರಿಗೆ ಬಾಡಿಗೆಗೆ ಗೊತ್ತುಪಡಿಸಿ, ಚಾಲಕರಿಂದಲೇ ಹಣ ಪಡೆದು ವಂಚಿಸಿ ಅಪರಿಚಿತ ವ್ಯಕ್ತಿ ಪರಾರಿಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯದ ಗಾಂಧಿನಗರ ಪಾರ್ಕಿಂಗ್‌ನಲ್ಲಿರುವ ಗೂಡ್ಸ್‌ ಟೆಂಪೋ ಚಾಲಕರೊಬ್ಬರಲ್ಲಿ ಅಪರಿಚಿತನೋರ್ವ ಬೆಂಗಳೂರಿನ ಕನಕಪುರಕ್ಕೆ ಬಾಡಿಗೆ ಇದೆ. ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳನ್ನು ಸಾಗಿಸಲು ಮೂರು ಗೂಡ್ಸ್‌ ಗಾಡಿ ಬೇಕು. ಅಲ್ಲದೇ ಕನಕಪುರದಿಂದ ಹಿಂದಿರುಗುವಾಗ ವಿದ್ಯುತ್‌ ಟ್ರಾನ್ಸ್‌ಫ‌ರ್‌ ಕೂಡಾ ತರಲಿಕ್ಕಿದೆ. ಅದಕ್ಕೆ (407) ಗೂಡ್ಸ್‌ ಟೆಂಪೋ ಬೇಕು. ನನ್ನಲ್ಲಿ ಕೇಂದ್ರ ಸರಕಾರದ ಕಾರ್ಡ್‌ ಇದ್ದು, ಅದರಲ್ಲಿ ಸಬ್ಸಿಡಿಯಲ್ಲಿ ಡೀಸೆಲ್‌ ಸಿಗುತ್ತದೆ. ನೀವು 1 ಲೀಟರ್‌ ಡೀಸೆಲ್‌ಗೆ 55 ರೂ.ನಂತೆ ಪಾವತಿಸಿದರಾಯಿತು. ಉಳಿದ ಬಾಡಿಗೆ ಹಣವನ್ನು ನಿಮಗೆ ಅಲ್ಲಿಗೆ ತಲುಪಿದ ಮೇಲೆ ಕೊಡುತ್ತೇನೆ ಎಂದು ಹೇಳಿ ಅಪರಿಚಿತ ವ್ಯಕ್ತಿ ನಂಬಿಸಿದ್ದಾನೆ ಎನ್ನಲಾಗಿದೆ.

Also Read  ಅರಂಬೂರು: ವ್ಯಕ್ತಿತ್ವ ನಿರ್ಮಾಣಕ್ಕೆ ಎನ್ ಎಸ್ ಎಸ್ ಪೂರಕ -ಕೆ.ಆರ್.ಗಂಗಾಧರ್

ಬಳಿಕ ಮೂರು ವಾಹನಗಳಿಗೆ ಡೀಸೆಲ್‌ ತುಂಬಿಸಲು ಆರ್ಡರ್‌ ಮಾಡಿ, ಚಾಲಕರ ಕೈಯಿಂದ 55 ರೂ.ನಂತೆ ಮುಂಗಡ 7,600 ರೂ. ಪಡೆದು, ಬಾಸ್‌ ಮೆಸ್ಕಾಂ ಇಲಾಖೆಯ ಬಳಿ ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಹಣ ಪಾವತಿಸುತ್ತೇನೆ ಎಂದು ಹೇಳಿ ಅಟೋ ರಿಕ್ಷಾದಲ್ಲಿ ತೆರಳಿದ್ದಾನೆ.


ಮೂರು ವಾಹನಗಳಿಗೆ ಸುಮಾರು 12,600 ರೂ. ಮೌಲ್ಯದ ಡೀಸೆಲ್‌ ತುಂಬಿಸಿದ ಅಪರಿಚಿತ ಕಾರ್ಡ್‌ ತರುವುದಾಗಿ ಹೇಳಿ ಹೋಗಿ ತುಂಬಾ ಹೊತ್ತು ಬಾರದೇ ಇದ್ದಾಗ ಸಂಶಯಗೊಂಡ ಚಾಲಕರು ಆತ ಹೋದ ಅಟೋ ಚಾಲಕರಲ್ಲಿ ವಿಚಾರಿಸಿದಾಗ ಆರೋಪಿ ಪರಾರಿಯಾಗಿರುವು ಗೊತ್ತಾಗಿದೆ. ಈ ಕುರಿತು ಚಾಲಕರು ಸುಳ್ಯ ಠಾಣೆಗೆ ಮಾಹಿತಿ ನೀಡಿದ್ದಾರೆ.

Also Read  ಪುತ್ತೂರು ಅರಣ್ಯ ಇಲಾಖೆಯ ಮಿಂಚಿನ ಕಾರ್ಯಾಚರಣೆ ➤ ಆನೆದಂತ ಸಹಿತ 6 ಮಂದಿ ಅರೆಸ್ಟ್..!

error: Content is protected !!
Scroll to Top