ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ- ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಡಿದ ಮಾಜಿ ಸಚಿವ

(ನ್ಯೂಸ್ ಕಡಬ) newskadaba.com ಇಸ್ಲಾಮಾಬಾದ್‌, ಜು. 19. ಭಾರತದ ಮಹತ್ವಾಕಾಂಕ್ಷೆಯಾದ ಚಂದ್ರಯಾನ-3 ರ ಕುರಿತು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್‌ ಚೌಧರಿ, ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದೀಗ ಫವಾದ್ ಚೌದರಿ ಅವರ ಸಂದರ್ಶನದ ವೀಡಿಯೋ ತುಣುಕೊಂದು ಎಲ್ಲೆಡೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ಇಸ್ರೋ ಸಂಸ್ಥೆ ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ, ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ಏನೆಂದು ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಆದರೆ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Also Read  ಚಂದ್ರಯಾನ-3 ಯಶಸ್ವಿ - ಇಸ್ರೋ ಅಧ್ಯಕ್ಷರಿಗೆ ವಿಶ್ವ ಬಾಹ್ಯಾಕಾಶ ಪ್ರಶಸ್ತಿ

ಜುಲೈ 14 ರಂದು ಚಂದ್ರಯಾನ-3 ಯೋಜನೆಯನ್ನು ಇಸ್ರೋ ಶ್ರೀಹರಿಕೋಟಾದ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಗಗನನೌಕೆಯು ಕಕ್ಷೆ ಬದಲಿಸುವ ಎರಡನೇ ಹಂತದ ಪ್ರಕ್ರಿಯೆಯು ಸೋಮವಾರ ಯಶಸ್ವಿಯಾಗಿದೆ.

https://bit.ly/44NSr4p

error: Content is protected !!
Scroll to Top