ನಡುರಸ್ತೆಯಲ್ಲೇ ಕಾಡುಕೋಣ ತಿರುಗಾಟ – ವಾಹನ ಸವಾರರ ಪರದಾಟ

(ನ್ಯೂಸ್ ಕಡಬ) newskadaba.com ಬೆಳ್ಮಣ್, ಜು. 19. ಕಾಡುಕೋಣವೊಂದು ರಸ್ತೆಗೆ ಅಡ್ಡಲಾಗಿ ಬಂದಿದ್ದು, ವಾಹನ ಸವಾರರು ಭಯಭಿತಗೊಂಡ ಘಟನೆ ಪಿಲಾರುಖಾನ ಕಾಡು ಪ್ರದೇಶದಲ್ಲಿ ನಡೆದಿದೆ.

ಪಿಲಾರುಖಾನ ಅರಣ್ಯ ಪ್ರದೇಶದ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಲಾಗಿದ್ದು, ಆದರೂ ಇದರ ಒಂದು ಬದಿಯ ತಂತಿ ಬೇಲಿಯನ್ನು ದಾಟಿಕೊಂಡ ಬಂದ ಬೃಹತ್ ಕಾಡುಕೋಣವೊಂದು ರಸ್ತೆಗೆ ಬಂದು ಮತ್ತೊಂದು ಬದಿಯ ಕಾಡಿಗೆ ಹೋಗಲು ಪರದಾಡಿತು. ಈ ಸಂದರ್ಭ ಬೆಳ್ಮಣ್ ಶಿರ್ವ ಸಾಗುವ ವಾಹನ ಸವಾರರು ಕೆಲಕಾಲ ರಸ್ತೆಯಲ್ಲಿ ವಾಹನವನ್ನು ನಿಲ್ಲಿಸುವಂತಾಗಿತ್ತು. ಸುಮಾರು ಸಮಯದ ಬಳಿಕ ಕಾಡುಕೋಣ ತಂತಿ ಬೇಲಿಯನ್ನು ದಾಟಿಕೊಂಡು ಮತ್ತೊಂದು ಬದಿಯ ಕಾಡಿಗೆ ತೆರಳಿರುವುದಾಗಿ ವರದಿಯಾಗಿದೆ.

Also Read  ಸುಳ್ಯ: ಕ್ರಿಶ್ಚಿಯನ್ ಸಮುದಾಯದ ಮೇಲಿನ ದಬ್ಬಾಳಿಕೆ ಖಂಡಿಸಿ ಮಾನವ ಸರಪಳಿ ಹಾಗೂ ಮೌನ ಪ್ರತಿಭಟನೆ

error: Content is protected !!
Scroll to Top