‘ಕನ್ಯಾಭಾಗ್ಯ’ ಯೋಜನೆಗೆ ಯುವ ರೈತರಿಂದ ಸಿಎಂ ಗೆ ಮನವಿ

(ನ್ಯೂಸ್ ಕಡಬ) newskadaba.com ಹಾವೇರಿ, ಜು. 19. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಯುವ ರೈತರನ್ನು ಮದುವೆಯಾಗಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಬೇಸತ್ತಿರುವ ಯುವಕರು ವಿಶೇಷ ಯೋಜನೆ ರೂಪಿಸುವಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಯುವ ರೈತರು ‘ಕನ್ಯಾಭಾಗ್ಯ’ ಆರಂಭಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇನ್ನು ನಮಗೆ 5 ರಿಂದ 6 ಎಕರೆ ಜಮೀನು ಇದ್ದರೂ ಕೂಡಾ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಎಷ್ಟೋ ಜನ ಕನ್ಯೆಯರನ್ನೇ ತೋರಿಸುತ್ತಿಲ್ಲ. 5 ಸಾವಿರ ಸಂಬಳ ಬರುವ ವ್ಯಕ್ತಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Also Read  ಪ್ರವೀಣ್ ಹತ್ಯೆಯ ಇಬ್ಬರು ಪ್ರಮುಖ ಆರೋಪಿಗಳ ಅರೆಸ್ಟ್ ➤ ಶಫೀಕ್ ಬೆಳ್ಳಾರೆ, ಝಾಕೀರ್ ಸವಣೂರು ಬಂಧನ

ಕೃಷಿ ಮಾಡುತ್ತಿರುವವನು ಕೂಡಾ ತನ್ನ ಮಗಳನ್ನು ಕೃಷಿಕನಿಗೆ ಕೊಡಲು ಹಿಂದೇಟು ಹಾಕುವ ಪರಸ್ಥಿತಿ ನಿರ್ಮಾಣವಾಗಿದ್ದು, ಈ ಸಂಬಂಧ ಯುವ ರೈತರನ್ನು ಮದುವೆಯಾದ ಯುವತಿಯರಿಗೆ ಕನಿಷ್ಠ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!
Scroll to Top