ಆಸ್ಟ್ರೇಲಿಯಾ ಸಮುದ್ರತೀರದಲ್ಲಿ ನಿಗೂಢ ವಸ್ತು ಪತ್ತೆ- ಚಂದ್ರಯಾನ-3ರ ಭಾಗವೆಂದು ಶಂಕೆ..!

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯಾ, ಜು. 19. ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆಯು ಪಶ್ಚಿಮ ಆಸ್ಟ್ರೇಲಿಯಾದ ಜುರಿಯನ್ ಕೊಲ್ಲಿಯ ಬಳಿಯ ಕಡಲತೀರದಲ್ಲಿ ಪತ್ತೆಯಾದ ವಸ್ತುವಿನ ಬಗ್ಗೆ ತನಿಖೆ ನಡೆಸುತ್ತಿದ್ದು, ಇದು ಭಾರತದ ಚಂದ್ರಯಾನ -3 ಮಿಷನ್‌ನ ಭಾಗವಾಗಿರಬಹುದು ಎಂಬ ಶಂಕಿಸಲಾಗಿದೆ.

ಭಾನುವಾರದಂದು ಮಧ್ಯಾಹ್ನ ಮಧ್ಯ ಪಶ್ಚಿಮ ಕರಾವಳಿಯ ಗ್ರೀನ್ ಹೆಡ್ ಟೌನ್ ಬಳಿ ನಿಗೂಢ ವಸ್ತುವೊಂದು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಪ್ರದೇಶದ ನಿವಾಸಿಗಳು ಅದನ್ನು ನೀರಿನಿಂದ ಎಳೆದು ತಂದಿದ್ದಾರೆ. ಕಡಲತೀರದಲ್ಲಿ ಸಿಕ್ಕ ವಸ್ತುವೊಂದು ಇದೀಗ ಭಾರೀ ಸಂಚಲನ ಮೂಡಿಸಿದೆ. ಡ್ರಮ್ ಆಕಾರದ ವಸ್ತುವು ತಾಮ್ರದಿಂದ ಮಾಡಲ್ಪಟ್ಟದ್ದಾಗಿದ್ದು, ಸ್ಥಳೀಯರು ವಿಭಿನ್ನ ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಇದು ರಾಕೆಟ್‌ನಿಂದ ಹೊರ ಬಿದ್ದ ಚೂರು ಇರಬಹುದು ಎಂಬ ಚರ್ಚೆಯೂ ನಡೆಯುತ್ತಿದೆ. ಈ ವಸ್ತುವಿನಿಂದ ದೂರ ಉಳಿಯುವಂತೆ ಸ್ಥಳೀಯರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Also Read  96 ಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದ 80 ವರ್ಷದ ಅಜ್ಜಿ.!


ಈ ವಸ್ತು ಯಾವುದು? ಎಲ್ಲಿಂದ ಬಂತು? ಎಂಬುದನ್ನು ತಿಳಿದುಕೊಳ್ಳಲು ಆಸ್ಟ್ರೇಲಿಯಾ ಸ್ಪೇಸ್ ಏಜೆನ್ಸಿ ಕೂಡ ಫೀಲ್ಡ್ ಗೆ ಇಳಿದಿದ್ದು, ಇದು ವಿದೇಶಿ ಬಾಹ್ಯಾಕಾಶ ಉಡಾವಣೆಗೆ ಸಂಬಂಧಿಸಿದ ವಸ್ತು ಎಂದೂ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆಯು ಹಲವು ದೇಶಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ. ಇದರ ಮಧ್ಯೆ, ಈ ವಸ್ತುವು ಭಾರತದ ಪಿಎಸ್‌ಎಲ್‌ವಿ ರಾಕೆಟ್‌ಗೆ ಸಂಬಂಧಿಸಿದೆ ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.

error: Content is protected !!
Scroll to Top