ಗಾಂಜಾ ಸಾಗಾಟ- ಓರ್ವ ಅರೆಸ್ಟ್

crime, arrest, suspected

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 19. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕಿಲೋ ಗಾಂಜಾ ಸಹಿತ ಆರೋಪಿ ಓರ್ವನನ್ನು ಹೊಸದುರ್ಗ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಡಿಕೈ ನೆಲ್ಲಂಗುಯಿಯ ಮನೋಜ್ ಥೋಮಸ್ (43) ಎಮದು ಗುರುತಿಸಲಾಗಿದೆ. ಪೊಲೀಸರು ಮಂಗಳವಾರದಂದು ರಾತ್ರಿ ಚೆಮ್ಮಟ ವಯಲ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾರಿನಲ್ಲಿ ಒಂದೂವರೆ ಕಿಲೋ ಗಾಂಜಾ ಪತ್ತೆಯಾಗಿದೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Also Read  ಸಾಲಭಾದೆ ತಾಳಲಾರದೆ ಆತ್ಮಹತ್ಯೆಗೆ ಶರಣು..!

error: Content is protected !!
Scroll to Top