ಅಮಾಯಕ ದೀಪಕ್ ಹತ್ಯೆಗೆ ಪ್ರತೀಕಾರವಾಗಿ ನಡೆದ ಬಶೀರ್ ಹತ್ಯೆ ಬಗ್ಗೆ ನಮಗೆ‌ ಚಿಂತೆಯಿಲ್ಲ ► ಕೊಲೆಗಡುಕರಿಗೆ ಬೆಂಬಲ ಸೂಚಿಸಿದ ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.28. ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆಯಾಗಿದೆ. ಆದ್ದರಿಂದ ಬಶೀರ್ ಹತ್ಯೆಯ ಬಗ್ಗೆ ನಮಗೇನೂ ಚಿಂತೆಯಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊನ್ನೆ ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಕೊಲೆ ನಡೆಯಿತು. ಒಬ್ಬ ಅಮಾಯಕ, ಮುಗ್ದ ಮುಸ್ಲಿಮನ ಹತ್ಯೆಯಾಯಿತು ಎಂದು ಮಾಧ್ಯಮಗಳಲ್ಲಿ ಭಾರೀ ವರದಿ ಬಂತು. ಬಶೀರ್ ಹತ್ಯೆಗೂ ಮೊದಲು ಅಮಾಯಕ ದೀಪಕ್ ರಾವ್ ಹತ್ಯೆ ನಡೆಯಿತು. ಅಮಾಯಕ ದೀಪಕ್ ರಾವ್ ಹತ್ಯೆಗೆ ಪ್ರತೀಕಾರವಾಗಿ ಬಶೀರ್ ಹತ್ಯೆಯಾದರೆ ನಮಗೇನೂ ಚಿಂತೆಯಿಲ್ಲ ಎಂದು ಕೊಲೆಗಡುಕರಿಗೆ ಬೆಂಬಲ ಸೂಚಿಸುವಂತಹ ಮಾತನ್ನು ಹೇಳಿರುವ ಮಾತು ಇದೀಗ ವೈರಲ್ ಆಗಿದೆ.

Also Read  ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಶಕ್ತಿ ಫೆಸ್ಟ್ 2020

error: Content is protected !!
Scroll to Top