ಮಂಗಳೂರು: ಚಪ್ಪಲಿ ಹುಡುಕಿಕೊಡಿ ಎಂದು 112ಗೆ ಕರೆ ಮಾಡಿದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.18. ಸಭಾಂಗಣದ ಹೊರಗೆ ಇಟ್ಟಿದ್ದ ಚಪ್ಪಲಿ ಕಳವಾದ ಬಗ್ಗೆ 112 ತುರ್ತು ಸ್ಪಂದನಕ್ಕೆ ಕರೆ ಮಾಡಿ ಪೊಲೀಸರಿಂದ ಹುಡುಕಾಟ ಮಾಡಿಸಿದ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.


ಯುವಕನೋರ್ವ ಶರವು ದೇವಸ್ಥಾನ ಸಮೀಪದ ಸಭಾಂಗಣಕ್ಕೆ ಬಂದಿದ್ದ. ಒಳಗೆ ಹೋಗುವಾಗ ತೆಗೆದಿಟ್ಟಿದ್ದ ಚಪ್ಪಲಿ ಹೊರಗೆ ಬರುವಾಗ ಇರಲಿಲ್ಲ.
ಹುಡುಕಾಟ ನಡೆಸಿದರೂ ಪ್ರಯೋಜನವಾಗದೆ ಕೊನೆಗೆ 112 ಗೆ ಕರೆ ಮಾಡಿದ್ದಾನೆ. ಏನೋ ಗೊಂದಲ ಆಗಿರಬಹುದೆಂದು ಪೊಲೀಸರು ಸ್ಥಳಕ್ಕೆ ಆಗಮಿಸಿದರೆ ಚಪ್ಪಲಿ ಕಳವಾಗಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಚಪ್ಪಲಿಗಾಗಿ ಹುಡುಕಾಡಿದರು ಪ್ರಯೋಜನವಾಗಲಿಲ್ಲ. ಈ ಬಗ್ಗೆ ಯುವಕ ಲಿಖಿತ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಚಪ್ಪಲಿ ಕಳವಿನ ಬಗ್ಗೆ ಸಿಸಿ ಕೆಮರಾ ದೃಶ್ಯ ಪರಿಶೀಲನೆ ನಡೆಸಲಾಗಿದೆ.

Also Read  ಬಂಟ್ವಾಳ ಹೋಮ್ ಕ್ವಾರಂಟೈನ್ ನಿಯಮ ಮೀರಿದಾತನ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top