ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಭರ್ಜರಿ ಗಿಫ್ಟ್‌ ➤ ಗೃಹಜ್ಯೋತಿಯಲ್ಲಿ ಮೂರು ಯೋಜನೆ ವಿಲೀನ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜು.18. ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಮೂರು ವಿದ್ಯುತ್‌ ಸಂಬಂಧಿ ಜ್ಯೋತಿ ಯೋಜನೆಗಳನ್ನು ಗೃಹಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ. ಇದರೊಂದಿಗೆ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಗೃಹಜ್ಯೋತಿಯ ನೇರ ಲಾಭ ದಕ್ಕಲಿದೆ.


ಚುನಾವಣೆ ವೇಳೆ ಘೋಷಿಸಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜುಲೈ 1 ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಕುಟುಂಬಕ್ಕೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ನೀಡಲಾಗುತ್ತಿದ್ದು, ಕಳೆದ 12 ತಿಂಗಳ ಸರಾಸರಿ ವಿದ್ಯುತ್‌ ಬಳಕೆ ಆಧರಿಸಿ ಆಗಸ್ಟ್‌ ತಿಂಗಳಿನಿಂದ ಗೃಹಜ್ಯೋತಿಯ ಲಾಭ ಜನರಿಗೆ ಸಿಗಲಿದೆ. ಈಗ ಈ ಯೋಜನೆಗೆ ಈಗಾಗಲೇ ಜಾರಿಯಲ್ಲಿದ್ದ ಮೂರು ಜ್ಯೋತಿ ಯೋಜನೆಗಳನ್ನು ವಿಲೀನಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

Also Read  ಶ್ರೀಘ್ರದಲ್ಲೇ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ : ವಿಜಯೇಂದ್ರ ಮುನ್ಸೂಚನೆ

 

error: Content is protected !!
Scroll to Top