ರಾಜ್ಯದಲ್ಲಿ ಬರಗಾಲ ಘೋಷಿಸಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ರೂ. ನೀಡಿ ➤ ಬಸವರಾಜ ಬೊಮ್ಮಾಯಿ ಆಗ್ರಹ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜು.18. ರಾಜ್ಯದಲ್ಲಿ ಮಳೆ ಅಭಾವ ಉಂಟಾಗಿ ರೈತರು ಬಿತ್ತಿದ ಬೀಜ ಮೊಳಕೆಯೊಡೆದಿಲ್ಲ. ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ ಒಂದು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮೇಲೆ ಪ್ರಾಸ್ತಾವಿಕ ಮಾತನಾಡಿದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಹಲವೆಡೆ ಮಳೆಯ ಅಭಾವ ಉಂಟಾಗಿದೆ. ನಿಗದಿತ ಸಮಯಕ್ಕೂ ಮಳೆ ಬಂದಿಲ್ಲ. ಮಳೆ ಬಾರದ ಕಾರಣ ರೈತರು ಬಿತ್ತನೆ ಬೀಜಗಳನ್ನು ಹಾಕಿಲ್ಲ. ಜುಲೈ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿದೆ. ಆದರೆ, ಎಲ್ಲ ಕಡೆಯೂ ಮಳೆಯಾಗಿಲ್ಲ ಎಂದರು.

Also Read  ವಿಟ್ಲ: ಭಜರಂಗದಳ ಮುಖಂಡನ ಮೇಲೆ ಮಾರಕಾಸ್ತ್ರದಿಂದ ದಾಳಿ..!!

 

error: Content is protected !!
Scroll to Top