ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ➤ ರಾಹುಲ್ ಗಾಂಧಿ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜು.18. ‘ಎಲ್ಲ ಕಳ್ಳರಿಗೂ ಮೋದಿ ಸರ್‌ನೇಮ್ ಇದೆ’ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 21ರ ವಿಚಾರಣೆಗೆ ಒಳಪಡಿಸಲಿದೆ.


ಸೂರತ್ ನ್ಯಾಯಾಲಯವು ತಮಗೆ ವಿಧಿಸಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಲಾಗಿತ್ತು. ಸಿಜೆಐ ಡಿವೈ ಚಂದ್ರಚೂಡ್ ಅವರ ಎದುರು ಮಾನಹಾನಿ ಪ್ರಕರಣದ ಶಿಕ್ಷೆ ವಿರುದ್ಧದ ಮೇಲ್ಮನವಿ ಅರ್ಜಿ ಪರಿಶೀಲನೆಗೆ ಬಂದಿತ್ತು. ಚಂದ್ರಚೂಡ್ ಅವರು ಅದನ್ನು ಜುಲೈ 21ಕ್ಕೆ ನಿಗದಿಪಡಿಸಿದರು.

Also Read  ➤➤Big Breaking News➤➤ ಹಿಂ.ಜಾ.ವೇ. ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣ ➤ ಆರೋಪಿಗಳಾದ ಕಿರಣ್ ರೈ, ಚರಣ್ ರೈ, ಪ್ರೀತೇಶ್ ಶೆಟ್ಟಿ ಹಾಗೂ ಆರೋಪಿಗಳ ಆಶ್ರಯದಾತ ಅತ್ತಾವರ ನಿವಾಸಿ ಸ್ಡೀವನ್ ಮೊಂತೆರೋ ಎಂಬಾತನ ಬಂಧನ.

 

error: Content is protected !!
Scroll to Top