‘ನಾನು ಬಿಜೆಪಿ ಜೊತೆಗೆ ದೃಢವಾಗಿದ್ದೇನೆ’ ➤ ಊಹಾಪೋಹಗಳಿಗೆ ತೆರೆ ಎಳೆದ ತೇಜಸ್ವಿನಿ ಅನಂತಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 18. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಗುರಿ ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಕಾಂಗ್ರೆಸ್​ಗೆ ಮುಂದಾಗಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ.


ಆಪರೇಷನ್ ಕಾಂಗ್ರೆಸ್​ನಡಿ ದಿ.ಮಾಜಿ ಕೇಂದ್ರ ಸಚಿವ ಅನಂತಕುಮಾರ್​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರನ್ನು ಕರೆ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದೂ ವರದಿಯಾಗಿತ್ತು. ಆದರೆ, ಇದೀಗ ತೇಜಸ್ವಿನಿ ಅನಂತ್​ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಲಾದ ವದಂತಿಗಳಿಗೆ ತೆರೆಯೆಳೆದಿದ್ದಾರೆ.


ಈ ಕುರಿತು ಸ್ಪಷ್ಟನೆ ನೀಡಿದ ಅವರು, ದಯವಿಟ್ಟು ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಭಾರತೀಯ ಜನತಾ ಪಕ್ಷದ ಜೊತೆಗೆ ಧೃಡವಾಗಿದ್ದೇನೆ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

Also Read  ಮನೆಗೆ ಹಾಗೂ ಮನೆಯ ಸದಸ್ಯರಿಗೆ ಆಗಿರುವ ದೃಷ್ಟಿ ದೋಷವನ್ನು ಈ ರೀತಿಯಾಗಿ ಸುಲಭವಾಗಿ ನಿವಾರಣೆ ಮಾಡಬಹುದು

ಕಾಂಗ್ರಸ್ ಪಕ್ಷವನ್ನು ಬಲಪಡಿಸುವ ಹಿನ್ನೆಲೆ ಅಭ್ಯರ್ಥಿಗಳ ಜೊತೆ ಬಿಜೆಪಿ ಭದ್ರಕೋಟೆಗಳನ್ನು ವಶಪಡಿಸಿಕೊಳ್ಳುವ ಸವಾಲು ಡಿಕೆ ಶಿವಕುಮಾರ್ ಮುಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ 14 ಸಂಪುಟ ಸಚಿವರು ಸೋತಿದ್ದಾರೆ. ಈಗ ಅದೇ ರೀತಿ ಬಿಜೆಪಿಯ ಪ್ರಭಾವಿ ಸಂಸದರ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

error: Content is protected !!
Scroll to Top