ಢಿಕ್ಕಿ ಹೊಡೆದ ಕಾರನ್ನು ಒಂದು ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದ ಲಾರಿ- ವಿಡಿಯೋ+ ಸುದ್ದಿ

(ನ್ಯೂಸ್ ಕಡಬ) newskadaba.com ಉಡುಪಿ, ಜು. 19. ಹಿಂದಿನಿಂದ ಬಂದ ಕಾರೊಂದು ಟಿಪ್ಪರ್‌ಗೆ ಢಿಕ್ಕಿ ಹೊಡೆದು ಸಿಲುಕಿಕೊಂಡ ಪರಿಣಾಮ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಟಿಪ್ಪರ್, ಕಾರನ್ನು ಎಳೆದೊಯ್ದ ಘಟನೆ ಹೆಜಮಾಡಿಯ ಕನ್ನಂಗಾರು ಬೈಪಾಸ್ ಎದುರು ನಡೆದಿದೆ.

ಉಡುಪಿ ಕಡೆಯಿಂದ ಸಾಗುತ್ತಿದ್ದ ಕಾರು ಟಿಪ್ಪರ್ ಗೆ ಹಿಂಬದಿಯಿಂದ ಹೋಗಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರು ಟಿಪ್ಪರ್ ನ ಹಿಂಭಾಗದಲ್ಲಿ ಸಿಲುಕಿಕೊಂಡಿದ್ದು, ಟಿಪ್ಪರ್ ಚಾಲಕನ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಕಾರಿನಲ್ಲಿದ್ದ ಸಾಗರ ಮೂಲದ ಜಾಫರ್ ಖಾನ್, ಶಾಹಿನ ಹಾಗೂ ಯಾಸಿರ್ ಖಾನ್ ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರು ಸಾಗರದಿಂದ ಮಂಗಳೂರು ಆಸ್ಪತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ, ಕಾರು ಮತ್ತು ಟಿಪ್ಪರನ್ನು ವಶಕ್ಕೆ ಪಡೆದಿದ್ದಾರೆ.

Also Read  ಅರಂತೋಡು: ಎ.ಕೆ‌ ಫ್ಯಾಮಿಲಿ ಮೀಟ್ ಕಾರ್ಯಕ್ರಮ

error: Content is protected !!
Scroll to Top