ಎನ್.ಡಿಎ ಸಭೆಗೆ ಆಹ್ವಾನಿಸಿದರೆ ಹೋಗುತ್ತೇನೆ..ಯುಪಿಎ ಸಭೆಗೆ ಹೋಗುವುದಿಲ್ಲ – ಹೆಚ್ಡಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 17. ಎನ್‌ಡಿಎ ಸಭೆಗೆ ಆಹ್ವಾನ ಬಂದರೆ ನಾನು ಭಾಗಿಯಾಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಎನ್‌ಡಿಎ ಮತ್ತು ಯುಪಿಎ ಸಭೆಗೆ ಇನ್ನೂ ಆಹ್ವಾನ ಬಂದಿಲ್ಲ. ಒಂದುವೇಳೆ ಯುಪಿಎ ಸಭೆಗೆ ಆಹ್ವಾನ ಬಂದರೂ ಹೋಗಲ್ಲ. ಆದರೆ ಎನ್‌ಡಿಎ ಸಭೆಗೆ ಆಹ್ವಾನಿಸಿದರೆ ಹೋಗಿ ಚರ್ಚೆಮಾಡಿ  ಮಾತನಾಡುತ್ತೇನೆ ಎಂದಿದ್ದಾರೆ. ಇನ್ನು ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡರೆ ಕೇಂದ್ರ ಸಚಿವ ಸ್ಥಾನ ಅಥವಾ ವಿರೋಧ ಪಕ್ಷದ ಸ್ಥಾನ ನೀಡಬಹುದು ಎಂಬ ಚರ್ಚೆಗೆ ಉತ್ತರಿಸಿದ ಅವರು, ನನಗೆ ಕೇಂದ್ರ ಸಚಿವ ಸ್ಥಾನ ಅಥವಾ ವಿಪಕ್ಷ ಸ್ಥಾನದ ಅವಶ್ಯಕತೆ ಇಲ್ಲ. ಅದರ ಚರ್ಚೆಯೂ ಮಾಡಲ್ಲ. ಬಿಜೆಪಿಯಲ್ಲಿ ಸಮರ್ಥರಿದ್ದಾರೆ. ಅವರನ್ನು ವಿರೋಧ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡಿ ಎಂದು ಕೇಂದ್ರದ ನಾಯಕರಿಗೆ ಹೇಳುತ್ತೇನೆ ಎಂದಿದ್ದಾರೆ.

Also Read  ಆಪರೇಷನ್ ಹಸ್ತಕ್ಕೆ ಮುಂದಾದ ಕಾಂಗ್ರೆಸ್ - ಶಾಸಕ ಮುನಿರತ್ನಗೆ ಶಾಕ್..!

error: Content is protected !!
Scroll to Top