(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ಅಂತರಾಷ್ಟ್ರೀಯ ಚಂದ್ರ ದಿನಾಚರಣೆಯ ಪ್ರಯುಕ್ತ ಇಸ್ರೋ ಸಂಸ್ಥೆಯು ರಾಜ್ಯದ 8 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಆನ್‍ಲೈನ್ ರಸಪ್ರಶ್ನೆ ಮತ್ತು ಪೋಸ್ಟರ್/ಪೇಂಟಿಂಗ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಆನ್‍ಲೈನ್ ಮಾದರಿಯ ರಸಪ್ರಶ್ನೆ 30 ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿದ್ದು, ಪ್ರತಿ ಸರಿ ಉತ್ತರಕ್ಕೆ +2 ಅಂಕ ಮತ್ತು ತಪ್ಪು ಉತ್ತರಕ್ಕೆ-1 ಅಂಕವಿದ್ದು, 15 ನಿಮಿಷಗಳ ಕಾಲಾವಕಾಶವಿರುತ್ತದೆ. ಚಂದ್ರನ ಪರಿಶೋಧನೆ (ಸಮನ್ವಯ ಮತ್ತು ಸುಸ್ಥಿರತೆ) ಮೂಲ ಪೋಸ್ಟರ್/ಪೇಂಟಿಂಗ್‍ನ ಒಂದು ಸ್ಕ್ಯಾನ್ ಮಾಡಿದ ಪ್ರತಿಯನ್ನು (ಪಿಡಿಎಫ್/ಪಿಎನ್‍ಜಿ/ಜೆಪಿಜೆ 1 ಎಂ.ಬಿ ವರೆಗೆ) ಅಪ್ಲೋಡ್ ಮಾಡಬಹುದು.
ಆಸಕ್ತ ವಿದ್ಯಾರ್ಥಿಗಳು ಇದೇ ಜುಲೈ 20ರೊಳಗೆ ತಮ್ಮ ಹೆಸರು https://spacequiz.iirs.gov.in/ ವೆಬ್‍ಸೈಟ್ ಮೂಲಕ ನೋಂದಾಯಿಸಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.