ಕಮಿಷನರೇಟ್ ವ್ಯಾಪ್ತಿಯಲ್ಲಿ 162 ಡ್ರಗ್ ವ್ಯಸನಿಗಳಿಗೆ ಕೌನ್ಸೆಲಿಂಗ್- ಆಯುಕ್ತರಿಂದ ಮಾಹಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 17. ಇಲ್ಲಿನ ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯ ಠಾಣೆಗಳಲ್ಲಿ 162 ಮಂದಿ ಡ್ರಗ್ಸ್ ವ್ಯಸನಿಗಳಿಗೆ ಭಾನುವಾರದಂದು ಕೌನ್ಸೆಲಿಂಗ್‌ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ‌.

ಮಾನಸಿಕ ಆರೋಗ್ಯ ತಜ್ಞರು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕೌನ್ಸೆಲಿಂಗ್ ನಡೆಸಿ ಮಾಹಿತಿ ಪಡೆದುಕೊಳ್ಳಲಾಯಿತು. ವ್ಯಸನದಿಂದ ಹೊರಬರಲು ಬೇಕಾದ ನೆರವು ಒದಗಿಸುವ ಬಗ್ಗೆ ಭರವಸೆ ನೀಡಲಾಯಿತು. ಡ್ರಗ್ಸ್ ವಿರುದ್ದ ಕಾರ್ಯಾಚರಣೆ ಹಾಗೂ ಜಾಗೃತಿ ಅಭಿಯಾನದ ಜತೆಗೆ ವ್ಯಸನಿಗಳ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆಯನ್ನು ಮಂಗಳೂರು ಪೊಲೀಸರು ಕಳೆದ ಮೂರು ವಾರಗಳಿಂದ ನಡೆಸುತ್ತಿದ್ದಾರೆ. ಕಳೆದ ವಾರ ಕೌನ್ಸೆಲಿಂಗ್‌ನಲ್ಲಿ 144 ಮಂದಿ ಪಾಲ್ಗೊಂಡಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ.

Also Read  ಪಡುಪೆರಾರೆ ಗ್ರಾಮ ಪಂಚಾಯತ್ ➤ 2019-20 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ

error: Content is protected !!
Scroll to Top