ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ವರುಷ- ಕೊಲೆ ಹಂತಕರಿಗೆ 2ನೇ ಬಾರಿಗೆ ಶರಣಾಗುವಂತೆ ಎನ್ಐಎ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 15. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಶರಣಾಗಬೇಕು ಎಂಬ ಎಚ್ಚರಿಕೆಯ ಸಂದೇಶವನ್ನು ಸುಳ್ಯದಲ್ಲಿ ಎರಡನೇ ಬಾರಿಗೆ ಎನ್‌ಐಎ ಹೊರಡಿಸಿದೆ.

 

ಇದು ತಲೆಮರೆಸಿಕೊಂಡಿರುವ ಕೊಲೆಗಟುಕರಿಗೆ ಎರಡನೇ ಎಚ್ಚರಿಕೆಯ ಸಂದೇಶವಾಗಿದ್ದು, ಈ ಎಚ್ಚರಿಕೆಗೂ ಬಗ್ಗದಿದ್ದಲ್ಲಿ ಮೂರನೇಯ ಎಚ್ಚರಿಕೆಯ ಸಂದೇಶವನ್ನು ಹೊರಡಿಸಲಾಗುತ್ತದೆ. ಅದರಲ್ಲೂ ಶರಣಾಗದೇ ಹೋದರೆ ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿಪಾಸ್ತಿಗಳನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬ ಸುಳಿವು ಲಭ್ಯವಾಗಿದೆ. ಅಲ್ಲದೇ ಆಗಸ್ಟ್ 18ರೊಳಗೆ ಶರಣಾಗಲೇಬೇಕು. ಈ ಹಿಂದೆ ಜೂ.30ರೊಳಗೆ ಶರಣಾಗಬೇಕು. ಇಲ್ಲದೇ ಹೋದಲ್ಲಿ ಅವರ ಮನೆಯನ್ನು ಜಪ್ತಿ ಮಾಡುವುದಾಗಿ ಎನ್ಎಐಎ(NIA) ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ತಿಳಿಸಿದ್ದರು. ಆದರೆ ಇದುವರೆಗೂ ಪ್ರವೀಣ್ ಹಂತಕರು ಶರಣಾಗಿರಲಿಲ್ಲ. ಇದಕ್ಕೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಸುಳ್ಯ ನಗರದಲ್ಲಿ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಅನೌನ್ಸ್ ಮಾಡುತ್ತಿದ್ದು, ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ ಎನ್ನಲಾಗಿದೆ. ಪ್ರವೀನ್ ನೆಟ್ಟಾರು ಅವರನ್ನು ಕಳೆದ ಜುಲೈ 26ರಂದು ಕೊಲೆ ಮಾಡಲಾಗಿತ್ತು.

Also Read  ಬಿಜೆಪಿಯವರು 25 ವರ್ಷಗಳ ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಲಿ ► ಸುಳ್ಯ ಶಾಸಕರಿಗೆ ಕಾಂಗ್ರೆಸ್ ಉಸ್ತುವಾರಿ ಸವಿತಾ ರಮೇಶ್ ಸವಾಲು

error: Content is protected !!
Scroll to Top