ಕಡಬ: ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೇಮಕಾತಿಗೆ ಅರ್ಜಿ ಆಹ್ವಾನ   ➤ ತಕ್ಷಣಕ್ಕೆ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com ಮಂಗಳೂರು, ಜು.15. ಮಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿದೆ. ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್’ ಮತ್ತು ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

17-01-2018 ರಂದು ಸರ್ಕಾರ ಹೊರಡಿಸಿದ ಆದೇಶದ ಅನುಸಾರ, ಕಡಬ ತಾಲೂಕು ಕಛೇರಿಯಲ್ಲಿ 1 ಬೆರಳಚ್ಚುಗಾರರು, ಡಾಟಾ ಎಂಟ್ರಿ ಆಪರೇಟರ್ ಮತ್ತು 3 ಡಿ ಗ್ರೂಪ್ ದರ್ಜೆ ನೌಕರರನ್ನು, ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ದಿನಾಂಕ: 20-06-2023 ರಂದು ಕಡಬ ತಾಲೂಕು ಕಛೇರಿಗೆ 1 ಡಾಟಾ ಎಂಟ್ರಿ ಆಪರೇಟ‌ರ್ ಮತ್ತು 3ಡಿ ಗ್ರೂಪ್ ದರ್ಜೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಹೊರಗುತ್ತಿಗೆಯಲ್ಲಿ ಸಿಬ್ಬಂದಿಯವರನ್ನು ನಿಯಾಮಾನುಸಾರ, ಅನುದಾನ ಬಿಡುಗಡೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

Also Read  ಲೋಕಾರ್ಪಣೆಗೆ ಸಿದ್ದವಾಯ್ತು ಕಾಸರಗೋಡು ತುಳುಭವನ

ಆಸಕ್ತ ಅಭ್ಯರ್ಥಿಗಳು 14-07-2023 ರಿಂದ 28-11-2013 ರ ಒಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ 28-07-2023 ರ ನಂತರ ಅರ್ಜಿ ಸಲ್ಲಿಸಿದರೆ ಪರಿಗಣಿಸುವುದಿಲ್ಲ .

ಡಾಟಾ ಎಂಟ್ರಿ ಆಪರೇಟರ್ ಗೆ ಅರ್ಹತಾ ಮಾನದಂಡ:
ಸ್ಥಳೀಯ ನಿವಾಸಿಯಾಗಿರಬೇಕು ಮತ್ತು ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು ಮತ್ತು ಪದವಿ ಹೊಂದಿರಬೇಕು. ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಇದಲ್ಲದೆ ಕನಿಷ್ಠ ಯಾವುದಾದರೂ ಒಂದು ಸಂಸ್ಥೆಯಲ್ಲಿ 2 ವರ್ಷ ಅನುಭವ ಹೊಂದಿರಬೇಕು.

ಡಿ ಗ್ರೂಪ್ ದರ್ಜೆಗೆ ಅರ್ಹತೆಗಳು:
ಸ್ಥಳೀಯ ನಿವಾಸಿಯಾಗಿದ್ದು, 10 ನೇ ತರಗತಿ ಪಾಸಾಗಿರಬೇಕು ಮತ್ತು ಕನಿಷ್ಠ 18 ವರ್ಷ ಗರಿಷ್ಟ 35 ವರ್ಷ ವಯಸ್ಸಾಗಿರಬೇಕು. ಈ ಮೇಲಿನ ಹುದ್ದೆಗೆ ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

Also Read  ಚಾಲಕನ ನಿಯಂತ್ರಣ ತಪ್ಪಿದ ಸೈಕಲ್‌‌ಗೆ ಢಿಕ್ಕಿ ಹೊಡೆದ ಕಾರು..! ➤ ಸೈಕಲ್ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top