ಲಂಚ ಪಡೆಯುತ್ತಿದ್ದ ಫುಡ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

crime, arrest, suspected

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 15. ಲಂಚ ಪಡೆಯುತ್ತಿದ್ದ ಫುಡ್‌ ಇನ್‌ಸ್ಪೆಕ್ಟರ್‌ ಓರ್ವರನ್ನು ಲೋಕಾಯುಕ್ತ ಅಧಿಕಾರಿಗಳು ಸುಮಾರು 15 ಕಿ.ಮೀ ನಷ್ಟು ದೂರ ಬೆನ್ನಟ್ಟಿ ಹಿಡಿದ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪ ಎಂಬಲ್ಲಿ ನಡೆದಿದೆ.

ಬಂಧಿತರನ್ನು ಮಹಂತೇಗೌಡ ದು ಗುರುತಿಸಲಾಗಿದೆ. ರಂಗದಾಮಯ್ಯ ಎಂಬವರು ಕೆ.ಜಿ ಸರ್ಕಲ್ ಬಳಿಯ ತಹಶೀಲ್ದಾರ್ ಆಫೀಸ್‍ನ ಫುಡ್ ಇನ್‍ಸ್ಪೆಕ್ಟರ್ ಮಹಂತೇಗೌಡ ಬಳಿ ವ್ಯಾಪಾರದ ಪರವಾನಗಿ ಮಾಡಿಸಲು ತೆರಳಿದ್ದ ವೇಳೆ ಮಹಂತೇಗೌಡ 1 ಲಕ್ಷ ರೂ. ಹಣವನ್ನು ಲಂಚವಾಗಿ ನೀಡುವಂತೆ ಕೇಳಿದ್ದನು.  ಅಲ್ಲದೇ 12,000 ಮುಂಗಡವಾಗಿ ಹಣ ಪಡೆದಿದ್ದ ಮಹಂತೇಶ್, ಮತ್ತೆ 43 ಸಾವಿರ ರೂ. ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

Also Read  ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು

ಲಂಚ ಸ್ವೀಕರಿಸುವ ಬಗ್ಗೆ ಖಚಿತ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಮಹಂತೇಗೌಡ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅಲ್ಲದೇ ಲೋಕಾಯುಕ್ತ ಅಧಿಕಾರಿಗಳ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ. ಆದರೂ ಹಣ ಪಡೆದು ಸುಮಾರು 15 ಕಿ.ಮೀ ದೂರ ಓಡಿದ್ದ ಮಹಂತೇಗೌಡನನ್ನು ಬೆನ್ನಟ್ಟಿದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಆರೋಪಿಯ ವಿರುದ್ದ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವುದು,  ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿರುವುದು, ಹಲ್ಲೆ ಮತ್ತು ಪೊಲೀಸರು ಕರ್ತವ್ಯ ನಿರ್ವಹಿಸದಂತೆ ತಡೆದ ಆರೋಪದ ಮೇಲೆ ಅಧಿಕಾರಿಯ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!
Scroll to Top