(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 15. ಕ್ಯೂ ನಿಲ್ಲುವ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಚಾಲಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಘಟನೆಯಿಂದ ಪರಿಸ್ಥಿತಿ ತಿಳಿಗೊಳಿಸಲು ಬಂದಿದ್ದ ಸ್ಥಳೀಯ ಪುರಸಭಾ ಸದಸ್ಯನಿಗೆ ಗಾಯವಾಗಿದ್ದು, ಜಮಾಯಿಸಿದ್ದ ಜನರನ್ನು ಚದುರಿಸಲು ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಬಿಸಿರೋಡಿನ ಕೈಕಂಬದಲ್ಲಿ ನಡೆದಿದೆ.
ಬಿಸಿರೋಡಿನ ಕೈಕಂಬದಲ್ಲಿ ರಿಕ್ಷಾ ಕ್ಯೂ ನಿಲ್ಲುವ ವಿಚಾರಕ್ಕೆ ಸಂಬಂಧಿಸಿ ರಿಕ್ಷಾ ಯೂನಿಯನ್ ಪ್ರಮುಖನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹಲ್ಲೆಗೊಳಗಾದವನ ಕಡೆಯ ಗುಂಪು ಹಲ್ಲೆ ನಡೆಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.
ಗಲಾಟೆಯನ್ನು ನಿಲ್ಲಿಸಲು ಸ್ಥಳೀಯ ಪುರಸಭಾ ಸದಸ್ಯ ಹಸೈನಾರ್ ಸ್ಥಳಕ್ಕೆ ಬಂದಿದ್ದು, ಅವರಿಗೂ ಗಾಯವಾಗಿದೆ. ಗಾಯಗೊಂಡ ಹಸೈನಾರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೋಲೀಸರು ಆಗಮಿಸಿದ್ದು, ಎರಡು ಗುಂಪುಗಳನ್ನು ಚದರಿಸಲು ಲಾಠಿ ಪ್ರಹಾರ ನಡೆಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.