ವಿಮಾನ ಟಿಕೆಟ್ ಬುಕ್ ಮಾಡಿದ್ರೆ 1.5 ಕೆಜಿ ಟೊಮ್ಯಾಟೊ ಫ್ರೀ…!

(ನ್ಯೂಸ್ ಕಡಬ) newskadaba.com ಚೆನ್ನೈ, ಜು. 14. ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದಾಗಿ ಅನೇಕ ಜನರ ಆರ್ಥಿಕತೆಯ ಮೇಲೆ ಹೊರಬಿದ್ದಿದೆ. ಕೆಲವು ಪ್ರದೇಶಗಳಲ್ಲಿ ಟೊಮ್ಯಾಟೋ ಕೆ.ಜಿಗೆ 200 ರೂ. ಆಗಿದ್ದರೆ ಇನ್ನೂ ಕೆಲವು ಕಡೆಗಳಲ್ಲಿ 150 ರೂ. ಇದೆ ಆದರೆ ಇದನ್ನೇ ಬಂಡವಾಳವನ್ನಾಗಿಸಿ ಮಧುರೈನ ವಿಮಾನ ಟಿಕೆಟ್ ಬುಕ್ ಮಾಡುವ ಸಂಸ್ಥೆಯೊಂದು ಪ್ರಯಾಣಿಕರಿಗೆ ಟೊಮ್ಯಾಟೋ ಕೊಡುವ ಆಫರ್ ನೀಡಿರುವ ಪ್ರಸಂಗ ನಡೆದಿದೆ.

ಹೌದು, ಮಧುರೈ ನ ಟ್ರಾವೆಲಿಂಗ್ ಏಜೆನ್ಸಿ ಕೇಂದ್ರದಲ್ಲಿ ದೇಶೀಯ ವಿಮಾನ ಟಿಕೆಟ್ ಬುಕ್ ಮಾಡಿದಲ್ಲಿ ಅಂತವರಿಗರ ಒಂದು ಕೆಜಿ ಟೊಮ್ಯಾಟೋ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬುಕ್ ಮಾಡಿದವರಿಗೆ ಒಂದೂವರೆ ಕೆಜಿ ಟೊಮ್ಯಾಟೋ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿದೆ.

Also Read  ನಟಿ ಉರ್ಫಿಯನ್ನು ವಿಚಾರಣೆಗೆ ಕರೆದ ಮುಂಬೈ ಪೊಲೀಸರು   

ಟ್ರಾವೆಲಿಂಗ್ ಏಜೆನ್ಸಿ ಮಾಲೀಕನ ಪ್ರಕಾರ ಟೊಮ್ಯಾಟೋ ಆಫರ್ ನೀಡಿದ ಬಳಿಕ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿಕೆಟ್ ಬುಕಿಂಗ್ ಮಾಡಲು ಕರೆ ಬರುತ್ತಿದೆ ಎಂದು ಹೇಳಿದ್ದಾರೆ.

error: Content is protected !!
Scroll to Top