ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ- ಸಿಬಿಐಗೆ ಚಾಟಿ ಬೀಸಿದ ಹೈಕೋರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 14. ಡಿಸಿಎಂ ಡಿಕೆಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿವರಣೆ ನೀಡಲು ಮುಂದಾದ ಸಿಬಿಐ ನ್ನು ಕರ್ನಾಟಕ ಹೈಕೋರ್ಟ್ ಬಾಯಿ ಮುಚ್ಚಿಸಿದ ಪ್ರಸಂಗ ನಡೆದಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದ ಎಫ್ಐಆರ್ ರದ್ದುಗೊಳಿಸುವಂತೆ ಡಿಕೆಶಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೆ. ನಟರಾಜನ್ ಅವರ ಏಕಸದಸ್ಯ ನ್ಯಾಯಪೀಠವು ಗುರುವಾರದಂದು ವಿಚಾರಣೆ ನಡೆಸಿತು. ಈ ವೇಳೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್, ಡಿಕೆಶಿ ಅವರ ಅಕ್ರಮ ಆಸ್ತಿ ಗಳಿಕೆಯ ಕುರಿತು ವಿವರಿಸಲು ಮುಂದಾಗಿದ್ದಾರೆ. ಆದರೆ, ನ್ಯಾಯಮೂರ್ತಿ ಕೆ.ನಟರಾಜನ್ ಅವರು ಪ್ರಸನ್ನ ಕುಮಾರ್ ಬಾಯಿ ಮುಚ್ಚಿಸಿದರಲ್ಲದೇ ನೀವು ಈ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ನೀಡಿದ್ದೀರಿ, ಇದರ ಮುಖ್ಯಾಂಶದ ಪ್ಯಾರಾ ಸಂಖ್ಯೆ 3.15ರಲ್ಲಿ ಏನಿದೆ ಎಂಬುದು ಗೌಪ್ಯವಲ್ಲವೇ ಎಂದು ಪ್ರಶ್ನಿಸಿದರು.

Also Read  ಕಡಬ: ಅಕ್ರಮ ಮರಳುಗಾರಿಕೆಯ ವರದಿಯ ಹಿನ್ನೆಲೆ ➤ ಖಾಸಗಿ ವಾಹಿನಿ ವರದಿಗಾರನಿಗೆ ಕೊಲೆ ಬೆದರಿಕೆ - ದೂರು ದಾಖಲು

error: Content is protected !!