ಕಡಬ: ಜೈನಮುನಿ ಕೊಲೆ ಖಂಡಿಸಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜು. 14. ಹಿರೇಕೋಡಿ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಹಾಗೂ ಇದರ ಸಮಗ್ರ ತನಿಖೆಗಾಗಿ ಮತ್ತು ಮುಂದಿನ ದಿನಗಳಲ್ಲಿ ಜೈನ ಮುನಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಆಗ್ರಹಿಸಿ ಕಡಬ ತಾಲೂಕಿನ ಜೈನ ಸಮಾಜ ಬಾಂಧವರು ಗುರುವಾರದಂದು ಕಡಬ ತಾಲೂಕು ಆಡಳಿತ ಸೌಧದ ಮುಂದೆ ಮೌನ ಪ್ರತಿಭಟನೆ ನಡೆಸಿದರು.

ಕಡಬದ ಸಿ.ಎ.ಬ್ಯಾಂಕ್ ವಠಾರದಿಂದ ಕಡಬದ ಮುಖ್ಯರಸ್ತೆಯ ಮೂಲಕ ಮೌನ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು, ಕಡಬ ತಾಲೂಕು ಆಡಳಿತ ಸೌಧಕ್ಕೆ ತೆರಳಿ ಕಡಬ ತಹಶೀಲ್ದಾರ್ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಡೆಪ್ಪುಣಿಗುತ್ತು ಕೆ. ಮಹಾವೀರ ಜೈನ್‌ರವರು ಅಹಿಂಸೆ, ಬದುಕು ಮತ್ತು ಬದುಕಲು ಬಿಡು ಎಂಬ ತತ್ವವನ್ನು ಸದಾ ತಮ್ಮ ಬದುಕಿನಲ್ಲಿ ಪಾಲಿಸುವ ಅಲ್ಪಸಂಖ್ಯಾತರಾದ ಜೈನ ಸಮುದಾಯದವರು ಸದಾ ಸಂಯಮದಿಂದ ಎಲ್ಲರ ಜೊತೆ ಶಾಂತಿ ಸಮಾಧಾನದಿಂದ ಬದುಕುವವರು. ದಿಗಂಬರ ಮುನಿಗಳಂತೂ ಸರ್ವಸ್ವವನ್ನೂ ತ್ಯಾಗ ಮಾಡಿ ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣಕ್ಕಾಗಿ ಕಠಿಣ ವೃತ ನಿಯಮಗಳನ್ನು ಪಾಲಿಸುವವರು. ಅಂತಹ ಮುನಿವರ್ಯರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ ಎಂದರು.

Also Read  ಉರುಳಿಗೆ ಸಿಲುಕಿ ಮೃತಪಟ್ಟ ಚಿರತೆ..! 

ಈ ಸಂದರ್ಭದಲ್ಲಿ ಶೆಟ್ಟಿಮೂಲೆ ಶ್ರೇಯಾಂಶ ಶೆಟ್ಟಿ ಪಂಜ, ಧನ್ಯಕುಮಾರ್ ರೈ ಉಪ್ಪಿನಂಗಡಿ, ಡಾ|ಜಯಕೀರ್ತಿ ಜೈನ್ ಧರ್ಮಸ್ಥಳ, ಇಚ್ಲಂಪಾಡಿ ಬಸದಿಯ ಆಡಳಿತ ಸಮಿತಿ ಅಧ್ಯಕ್ಷ ಶುಭಕರ ಹೆಗ್ಗಡೆ, ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್, ಜಿನೇಂದ್ರ ಇಂದ್ರ, ಧರಣೇಂದ್ರ ಇಂದ್ರ, ಅಕ್ಷಯಕುಮಾರ್, ಚಂದ್ರಶೇಖರ ಶೆಟ್ಟಿ ಕೂರಟ, ಮಂಜುಳಾ, ಸುರಭಿ ಜಯಕುಮಾರ್, ರಾಜಕುಮಾರ್ ಶೆಟ್ಟಿ, ದೀಪಿಕಾ ರವೀಂದ್ರ ಆರಿಗ, ನಾಗಕನ್ನಿಕಾ, ರವಿರಾಜ ಶೆಟ್ಟಿ, ನೆಲ್ಯಾಡಿ ಬಸದಿಯ ಸುಮಂತ್, ಪಾರ್ಶ್ವನಾಥ ಶೆಟ್ಟಿ, ಮರ್ದಾಳ ಬಸದಿಯ ಅನೂಪ್‌ಕುಮಾರ್ , ಭೂಷಣ್‌ಕುಮಾರ್ ಇಂದ್ರ, ಯುವರಾಜ ಜೈನ್ ಮರೆಂಗೋಡಿ, ರಾಜೇಂದ್ರ ಹೆಗ್ಡೆ, ಸ್ನೇಹಪ್ರಿಯಾ, ಸವಣೂರು ಬಸದಿಯಿಂದ ರೂಪೇಶ್ ಜೈನ್, ಶ್ರೇಯಾಂಶ ಇಂದ್ರ, ಮನೋಹರ, ರಾಜದೀಪಕ್, ಸುದರ್ಶನ್, ನೇರಂಕಿ ಬಸದಿಯಿಂದ ವಾಯುಪ್ರಭ ಹೆಗ್ಡೆ, ದೇವಪಾಲ, ವೀರೇಂದ್ರ ಮೇಲೂರು, ಪುಷ್ಪದಂತ ಶೆಟ್ಟಿ, ವಿದ್ಯಾಕುಮಾರ್, ಧರಣೇಂದ್ರ ಇಂದ್ರ ಕಡಬ, ಕುಳವಳಿಕೆ ಬಸದಿಯ ಜಿನಪ್ರಕಾಶ್, ಸೀಮಂಧರ ಜೈನ್, ಫಣಿರಾಜ್ ಕೊಕ್ಕಡ, ಸಂಪತ್‌ಕುಮಾರ್ ಕೊಕ್ಕಡ, ಧನಕೀರ್ತಿ ಶೆಟ್ಟಿ ಮೊದಲಾದವರು ಭಾಗವಹಿಸಿದರು. ಮಹಾವೀರ ಜೈನ್ ಸ್ವಾಗತಿಸಿ, ಧರಣೇಂದ್ರ ಜೈನ್ ಬೆದ್ರಾಜೆ ವಂದಿಸಿದರು.

Also Read  ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಗೆ 75 ಶೇಕಡ ಫಲಿತಾಂಶ

error: Content is protected !!
Scroll to Top