ಬೀಚ್ ನಲ್ಲಿ ಬಿಕಿನಿಯಾಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ – ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕನ್ನಡತಿ ನಟಿಯ ಹಾಟ್ ಫೋಟೊ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.13. ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿರುವ ಕನ್ನಡತಿ‌ ಹುಡುಗಿ ಸಾರಾ ಅಣ್ಣಯ್ಯ ಇದೀಗ ಬಿಕಿನಿ ವೇಷ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಗೋವಾ ಬೀಚ್ ನಲ್ಲಿ ಬಿಕಿನಿ ತೊಟ್ಟು ಫೊಟೊಗೆ ಪೋಸ್ ನೀಡುವ ಮೂಲಕ ಕಿರುತೆರೆಯಲ್ಲಿ ನಟಿಸುತ್ತಾ ಬಿಕಿನಿ ತೊಡುವ ಕೆಲವೇ ಕೆಲವು ನಟಿಯರ ಸಾಲಿಗೆ ಇದೀಗ ಸಾರಾ ಅಣ್ಣಯ್ಯ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಸ್ವಲ್ಪ ಮಟ್ಟಿಗೆ ಅರೆಬರೆ ಬಟ್ಟೆ ತೊಟ್ಟಿದ್ದ ಸಾರಾ ಅಣ್ಣಯ್ಯ ಇದೀಗ ಪೂರ್ಣ ಪ್ರಮಾಣದಲ್ಲಿ ಬಿಕಿನಿ ತೊಡುವ ಮೂಲಕ ಪಡ್ಡೆ ಹುಡುಗರಿಗೆ ಹಾಟ್ ಅಗಿ‌ ಕಂಡಿದ್ದಾರೆ. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಸಾರಾ ಅಣ್ಣಯ್ಯ ತಮ್ಮ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕಮೆಂಟ್ ಗಳು ಬರಲಾರಂಭಿಸಿದೆ.

Also Read  ಪಠ್ಯಪುಸ್ತಕಗಳ ವಿಚಾರದಲ್ಲಿ ಮಾಡಿರುವ ಎಡವಟ್ಟುಗಳನ್ನು ತಿದ್ದುತ್ತೇವೆ➤ಡಾ.ಎಚ್.ಸಿ.ಮಹದೇವಪ್ಪ

ಕೆಲವರು ಪೋಟೋ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಮೆಂಟ್ ಮೂಲಕ ಉಗಿದಿದ್ದಾರೆ. ಇದ್ಯಾವುದಕ್ಕೂ ಕ್ಯಾರೇ ಅನ್ನದ ಸಾರಾ ಅಣ್ಣಯ್ಯ ಕಮೆಂಟ್ ಆಫ್ ಮಾಡುವ ಗೋಜಿಗೂ ಹೋಗಿಲ್ಲ. ಅವರ ಅಭಿಮಾನಿಗಳ ಪೈಕಿ‌ ಕೆಲವರಿಗೆ ಈ ಫೋಟೊ ಇಷ್ಟವಾಗಿದ್ದರೆ ಇನ್ನು ಕೆಲವರಿಗೆ ಇಷ್ಟವಾದಂತೆ ಕಾಣುತ್ತಿಲ್ಲ. ಇನ್ನು ಬಾಲಿವಿಡ್ ನಟಿಯರು ಕೂಡಾ ಈ ರೀತಿಯ ಪೋಸ್ಟ್ ಹಾಕುವುದಿಲ್ಲ ಎಂದು ಕೆಲವು ಅಭಿಮಾನಿಗಳು ಹೇಳಿದರೆ, ಇನ್ನು ಕೆಲವರು ಅಭಿನಂದಿಸಿ ಕಾಮೆಂಟ್ ಹಾಕಿದ್ದಾರೆ.

error: Content is protected !!
Scroll to Top